ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನಿಂದ ಅರ್ಜುನ ಟ್ರೋಫಿ

0

ಸುಬ್ರಹ್ಮಣ್ಯದಲ್ಲಿ ಅನಾಥಶ್ರಮ ನಿರ್ಮಾಣದ ಉದ್ದೇಶ ಇಟ್ಟುಕೊಂಡು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸುಬ್ರಹ್ಮಣ್ಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅರ್ಜುನ ಟ್ರೋಫಿ ಹೊನಲು ಬೆಳಕಿನ ಅಹ್ವಾನಿತ ತಂಡಗಳ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಫೆ.4 ರಂದು ಎಸ್.ಎಸ್.ಪಿ.ಯು ಕಾಲೇಜಿನ ಮೈದಾನದಲ್ಲಿ ನಡೆಯಿತು.

ಪಂದ್ಯಾಟದ ಪ್ರಥಮ ಬಹುಮಾನ ₹50,000 ಮತ್ತು ಅರ್ಜುನ ಟ್ರೋಫಿಯನ್ನು ಎಸ್.ಡಿ.ಎಂ ಉಜಿರೆ ತಂಡ ಪಡೆಯಿತು, ದ್ವಿತೀಯ ಬಹುಮಾನವನ್ನು ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್ ಸುಬ್ರಹ್ಮಣ್ಯ ತಂಡ ಪಡೆದು
₹ 30,000 ಮತ್ತು ಅರ್ಜುನ ಟ್ರೋಫಿ ಪಡೆಯಿತು. ತೃತೀಯ ಸ್ಥಾನವನ್ನು ಉಮಾಮಹೇಶ್ವರಿ ಕಾಪಿಕಾಡು ಪಡೆದು ₹ 20,000 ಮತ್ತು ಅರ್ಜುನ ಟ್ರೋಫಿ ಪಡೆಯಿತು. ಚತುರ್ಥ ಬಹುಮಾನ 20,000 ಮತ್ತು ಅರ್ಜುನ ಟ್ರೋಫಿ ಆಧಿಶ್ರೀ ಸುಬ್ರಹ್ಮಣ್ಯ ತಂಡ ಪಡೆಯಿತು. ಉತ್ತಮ ದಾಳಿಗಾರನಾಗಿ ಎಸ್.ಡಿ‌.ಎಂ ನ ರತನ್, ಉತ್ತಮ ಹಿಡಿತಗಾರನಾಗಿ ಎಸ್.ಡಿ.ಎಂ ನ ಸುಶಾಂತ್, ಸವ್ಯಸಾಚಿ ಪ್ರಶಸ್ತಿ ಪ್ರಶಾಂತ್ ಸ್ಪೋರ್ಟ್ಸ್ ಕ್ಕಬ್ ನ ದರ್ಶನ್ ಪಡೆದರು.

ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಅಧ್ಯಕ್ಷೆ ವಹಿಸಿದ್ದರು.
ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ‌ ಮಠದ ಶ್ರೀ ಗಳಾದ ಡಾI ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ದೀಪ ಬೆಳಗಿಸಿ ಪಂದ್ಯಾಟ ಉದ್ಘಾಟಿಸಿದರು. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಾl ರವಿ ಕಕ್ಕೆಪದವು, ಪುತ್ತೂರು ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ ಗೌರವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರ್ನಾಟಕ ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ, ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ಲು, ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ನೆಕ್ರಾಜೆ, ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಗಣೇಶ್ ನಾಯರ್, ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬ ಇದರ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಹೊಸವಳಿಕೆ, ವಕೀಲರಾದ ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್, ಸುಬ್ರಹ್ಮಣ್ಯ ಗ್ರಾ.ಪಂ ಉಪಾಧ್ಯಕ್ಷ ವೆಂಕಟೇಶ್ ಎಚ್ ಎಲ್, ಜೆಸಿಐ ನ ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ರೋಟರಿ ಕ್ಲಬ್ ಪ್ರಶಾಂತ ಕೋಡಿಬೈಲು, ಗ್ರಾ.ಪಂ ಸದಸ್ಯ ನಾರಾಯಣ ಅಗ್ರಹಾರ, ಜೇಸಿಐ ಅಧ್ಯಕ್ಷ ಯೋಗನಾಥ್, ರೋಟರಿ ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲು, ರತ್ನಾಕರ ಶೆಟ್ಟಿ, ನಟೇಶ್ ಪೂಜಾರಿ, ಕಿರಣ್ ಬುಡ್ಲೆಗುತ್ತು, ರಾಮಕೃಷ್ಣ ಮಲ್ಲಾರ, ಮಹೇಶ್ ನಡುತೋಟ, ಗಿರಿಧರ ಸ್ಕಂದ, ಭಾರತೀ ದಿನೇಶ್, ಕಿಶೋರ್ ಕುಮಾರ್, ಚಂದ್ರಶೇಖರ, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಮಾಧ್ಯಮದ ಮಾಲಕ ಡಾl ಯು.ಪಿ ಶಿವಾನಂದ, ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ, ನಿವೃತ್ತ ಯೋಧ ಬಿ.ಕೆ ಮಾದವ ಗೌಡ, ಯಕ್ಷಗಾನ ಕಲಾವಿದ ಶ್ರೀನಿವಾಸ ರೈ ಕಡಬ, ನಿವೃತ್ತ ಶಿಕ್ಷಕ ಪುಂಗವ ಗೌಡ, ಡಾಕ್ಟರೇಟ್ ಪದವಿಧರ ಡಾll ಸಂಜಿತ್ ಎಸ್ ಅಂಚನ್, ಎನ್ ಐ ಎಸ್ ರ್ಯಾಂಕ್ ಹೋಲ್ಡರ್ ಕಿರಣ್ ಅರಂಪಾಡಿ, ಕುಕ್ಕೆ ಶ್ರೀ ಅಟೋ ಚಾಲಕ ಮಾಲಕರ ಸಂಘದ ವಿವೇಕಾನಂದ ದೇವರಗದ್ದೆ, ಬಿ.ಎಂ.ಎಸ್ ಚಾಲಕ ಮಾಲಕ ಸಂಘದ ದಿನೇಶ್ ಶಿರಾಡಿ, ಯಕ್ಷಗಾನ ಕಲಾವಿದ ಶ್ರೀನಿವಾಸ ರೈ ಕಡಬ, ದೈವ ನರ್ತಕ ಕರುಣಾಕರ ಪಿ, ಜ‌ನಸ್ನೇಹಿ ಯೊಗೀಶ್, ವಿಶ್ವ ದಾಖಲೆ ಯೋಗ ಪಟು ಕುಮಾರಿ ಗೌರಿತ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಿವರಾಮ ಏನೆಕಲ್ಲು, ಗೋಪಾಲ ಎಣ್ಣೆಮಜಲು, ದೀಪಕ್ ನಂಬಿಯಾರ್, ಮತ್ತು ವಿ.ಜೆ ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು. ರಾತ್ರಿಯಿಂದ ಮುಂಜಾನೆ 4.30 ಗಂಟೆ ವರೆಗೆ ಪಂದ್ಯಾಟ ನಡೆಯಿತು.

ರವಿ ಕಕ್ಕೆಪದವು ಟ್ರಸ್ಟ್ ನ ಉಪಾಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ಸುರೇಶ್ ಜಾದವ, ಕೋಶಾಧಿಕಾರಿ ಮಣಿಕಂಠ, ಸದಸ್ಯ ಚೇತನ್ ಬಳ್ಳಾರಿ ಮತ್ತಿತರರು ಸೇರಿ ನೂರಾರು ಸಂಖ್ಯೆಯ ರವಿಕಕ್ಕೆಪದವು ಅವರ ಬೆಂಬಲಿಗರು ಕಾರ್ಯಕ್ರಮ ಯಶಸ್ವಿಗೆ ದುಡಿದರು