ಫೆ.16 ರಂದು ಬಿಡುಗಡೆಯಾಗಲಿರುವ ರವಿಕೆ ಪ್ರಸಂಗ ದ ಪ್ರಚಾರ ಬಿರುಸು

0

ಕರ್ನಾಟಕದ ಬೆಸ್ಟ್ ಟೈಲರ್ ಕಂಟೆಸ್ಟ್ ಲಾಂಚ್

“ರವಿಕೆ‌ ಪ್ರಸಂಗ” ಚಿತ್ರ ಇದೇ ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಫೆಬ್ರವರಿ 4 ರಂದು ಚಿತ್ರದ ಪ್ರೀ ರಿಲೀಸ್ ಇವೆಂಟನ್ನು ಫೋರಮ್ ಮಾಲ್ ಕನಕಪುರದಲ್ಲಿ ಆಯೋಜಿಸಲಾಗಿತ್ತು. ನೂರಾರು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅಲ್ಲಿಗೆ ಬಂದಿದ್ದ ಜನರೆಲ್ಲರೂ ರವಿಕೆ ಪ್ರಸಂಗ ಚಿತ್ರದ ಪೋಸ್ಟರ್ ಹಿಡಿದು ಶುಭಕೋರಿದರು. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ನಿರ್ದೇಶಕರಾದ ಸಂತೋಷ್ ಕೊಡೆಂಕಿರಿ, ಕಥೆಗಾರ್ತಿ ಮತ್ತು ಸಂಭಾಷಣಾಗಾರ್ತಿ ಶ್ರೀಮತಿ ಪಾವನ ಸಂತೋಷ್, ಚಿತ್ರದ ನಾಯಕಿ ಗೀತಾ ಭಾರತಿ ಭಟ್, ನಟಿ ಪದ್ಮಜಾ ರಾವ್, ಜೊತೆಗೆ ಪೋಷಕ ಕಲಾವಿದರು, ಚಿತ್ರದ ಸಂಕಲನಕಾರರಾದ ರಘು ಉಪಸ್ಥಿತರಿದ್ದರು.

ಬಹಳ‌ ಮುಖ್ಯವಾಗಿ ಗೀತಾಭಾರತಿ ಭಟ್ ಅವರು ಅಲ್ಲಿದ್ದ ನೂರಾರು ಜನರೊಂದಿಗೆ ರವಿಕೆ ಪ್ರಸಂಗ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.

ಬಹಳ ವಿಶೇಷವಾಗಿ ಸ್ಟೇಜ್ ಮೇಲೆ “ಕರ್ನಾಟಕದ ಬೆಸ್ಟ್ ಟೈಲರ್” ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡಲಾಯಿತು.‌
ಬೆಸ್ಟ್ ಟೈಲರನ್ನು ಗುರುತಿಸಿ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ವಿಜೇತರಾದವರಿಗೆ ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನಿಮಾ ಟಿಕೆಟ್ ನೀಡಲಾಗುವುದು.

ಬಹಳ ಮುಖ್ಯವಾಗಿ ರಾಜ್ಯಾದ್ಯಂತ 7 ಸಾವಿರಕ್ಕೂ ಹೆಚ್ಚಿನ ಆಟೋ ಪಬ್ಲಿಸಿಟಿ ಮಾಡುತ್ತಿರುವ ರವಿಕೆ ಪ್ರಸಂಗ ಚಿತ್ರತಂಡ ಆಟೋ ಡ್ರೈವರ್ ಗಳೊಂದಿಗೆ ಒಂದಷ್ಟು ಸಿನಿಮಾದ ಬಗ್ಗೆ ಚರ್ಚಿಸಿ, ಗೀತಾಭಾರತಿ ಭಟ್ ಅವರು ಅನೇಕ ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು.
ಸಿನಿಮಾ ಕುರಿತು ಹಲವು ಗಣ್ಯರು ಈ ಸಂದರ್ಭದಲ್ಲಿ ಮಾತನಾಡಿದರು. ಜೊತೆಗೆ ಎಲ್ಲರನ್ನೂ ಗೌರವಿಸಲಾಯಿತು.

ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದೆ. ಚಿತ್ರವೂ ವಿಶೇಷ ಕಥಾಹಂದರ ಹೊಂದಿದ್ದು, ಒಂದು ರವಿಕೆಗೆ ಹುಕ್ ಹೇಗೆ ಮುಖ್ಯವೋ ಹಾಗೇ ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು ಅತೀ ಮುಖ್ಯವಾಗುತ್ತವೆ. ರವಿಕೆಯ ಒಂದು ಸಣ್ಣ ವಿಚಾರ ನ್ಯಾಷನಲ್ ಇಶ್ಯೂ ಆಗುವತ್ತ ಹೋಗುವ ಮತ್ತು ಜೀವನದ ಮೌಲ್ಯಗಳ ಅರ್ಥವನ್ನು ರವಿಕೆ ಪ್ರಸಂಗ ಚಿತ್ರದ ಮೂಲಕ ನಿಮ್ಮ ಮುಂದೆ ಇಡಲಿದೆ.

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಚಿತ್ರ ತಂಡ ಪ್ರೆಸ್ ಮೀಟ್ ಮಾಡಿ ಭರ್ಜರಿ ಪ್ರಚಾರ ಮಾಡಲಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಚಿತ್ರದ ಮೇಲಿರಲಿ ಎಂದು ಚಿತ್ರದ ನಿರ್ದೇಶಕರಾದ ಸಂತೋಷ್ ಕೊಡೆಂಕಿರಿ ಅವರು ಹಾಗೂ ಇಡೀ ಚಿತ್ರತಂಡದವರು ಕೋರಿದ್ದಾರೆ.