ಪಂಜ ಜಾತ್ರೆ : ನಾರಾಯಣ ನಂಬೀಷನ್ ರವರಿಗೆ ಸನ್ಮಾನ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 50 ವರ್ಷಗಳಿಂದ ಸೇವೆ ಮಾಡುತ್ತಿರುವ ಉತ್ಸವಗಳಲ್ಲಿ ನಾರಾಯಣ ನಂಬಿಷನ್ ರವರಿಗೆ ದೇಗುಲದ ವತಿಯಿಂದ ಸನ್ಮಾನ ಮಾಡಲಾಯಿತು.
ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿ, ಕೆಮ್ಮಿಂಜೆ ಕಾರ್ತಿಕ ತಂತ್ರಿ, ದೇಗುಲದ ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್,
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಡಾ.ನಿಂಗಯ್ಯ, ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ನ್ಯಾಯವಾದಿ ಪುರುಷೋತ್ತಮ ಮಲ್ಕಜೆ ಧರ್ಮಣ್ಣ ನಾಯ್ಕ ಗರಡಿ ಬೈಲು ,ಶರತ್ ಕುದ್ವ ನಾರಾಯಣ ನಾಯ್ಕ , ಪತ್ರಕರ್ತ ದುರ್ಗಕುಮಾರ ನಾಯರ್ ಕೆರೆ ಉಪಸ್ಥಿತರಿದ್ದರು.

ಪಕ್ಕದ ಕೇರಳ ರಾಜ್ಯದ ಪಯ್ಯನ್ನೂರಿ ನವರಾದ ನಾರಾಯಣ ನಂಬೀಷನ್ ಅವರು ಸುದೀರ್ಘ ಕಾಲದಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರಾ ಸಂದರ್ಭ ತಮ್ಮ‌ ಧಾರ್ಮಿಕ ಸೇವೆಯ ಮೂಲಕ ಕೊಡುಗೆ ನೀಡಿದವರು.

ದೇವರ ಜಾತ್ರೆಯ ಸಂದರ್ಭ ಕೈ ಬೆಳಕಿನ ಅತ್ಯಂತ ಪೂಜನೀಯ ಕಾರ್ಯ ಮಾಡುವುದರ ಜತೆಗೆ ಜಾತ್ರೆಯ ವಿಧಿವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾ ಬಂದವರು ನಾರಾಯಣ ನಂಬೀಷನ್.

ಸರಿ ಸುಮಾರು 45 ವರ್ಷಗಳಿಂದಲೂ ಹೆಚ್ಚು ಕಾಲ
ಪಂಜ ದೇಗುಲದ ಜಾತ್ರೆಗೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ.ಬಂಟಮಲೆಯಿಂದ ತೀರ್ಥ ತರುವ ಸಂದರ್ಭದಲ್ಲೂ ಕಡಿದಾದ ದಾರಿಯಲ್ಲಿ ಕೈ ಬೆಳಕು ಹಿಡಿಯುತ್ತಾ ಸಾಗಿ ಬಂದು ತಮ್ಮ ಧಾರ್ಮಿಕ ಸೇವೆ ನಡೆಸಿದ್ದಾರೆ.

ಸುಳ್ಯ ತಾಲೂಕಿನ ಹಲವು ದೇವಸ್ಥಾನಗಳ ಜಾತ್ರಾ ಸಂದರ್ಭ ಸೇವೆ ಸಲ್ಲಿಸಿದ್ದು, ಇವರು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಡಿಕೇರಿಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸುದೀರ್ಘ ಕಾಲದ ಧಾರ್ಮಿಕ ಸೇವೆಯನ್ನು ಗುರುತಿಸಿ ಇಂದು ಅವರನ್ನು ದೇವಳದ ವತಿಯಿಂದ ಸನ್ಮಾನಿಸಲಾಗುತ್ತಿದೆ.