ಐವರ್ನಾಡು ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ರವರಿಗೆ ಸನ್ಮಾನ

0

ಶ್ರೀ ಪಂಚಲಿಂಗೇಶ್ವರ ಸಾಂಸ್ಕೃತಿಕ ಕಲಾವೇದಿಕೆ ಐವರ್ನಾಡು ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗುರುದೇವ ಭಜನಾ ಸಮಿತಿಗೆ ಒಂದು ವರ್ಷ ಪೂರೈಸಿದ ನೆಲೆಯಲ್ಲಿ ಭಜನಾಸಮಿತಿಯ ಅಧ್ಯಕ್ಷರಾದ ಶ್ರೀಮತಿ ರೇವತಿ ಬೋಳುಗುಡ್ಡೆ ಇವರ ನೇತೃತ್ವದಲ್ಲಿ ಭಜನಾಸಮಿತಿಯ ಎಲ್ಲಾ ಸದಸ್ಯರು ಸೇರಿ ವೈದಿಕ ವೃತ್ತಿಯಿಂದ ಸೇವಾ ನಿವೃತಿ ಹೊಂದಿ ವಿಶ್ರಾಂತಜೀವನ ಇಚ್ಚಿಸಿರುವ ದೇವಸ್ಥಾನದ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಇವರನ್ನು ಸನ್ಮಾನಿಸಲಸಯಿತು . ಈ ಸಂದರ್ಭದಲ್ಲಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ್ ಮಡ್ತಿಲ, ಮಾಜಿ ಅಧ್ಯಕ್ಷರಾದ ಶಿವಪ್ಪ ಗೌಡ ನೆಕ್ಕರೆಕಜೆ, ಆಡಳಿತಾಧಿಕಾರಿಗಳಾದ ಪಿ.ಡಿ.ಒ ಶ್ಯಾಮ್ ಪ್ರಸಾದ್ ,ವಾಮನ ಗೌಡ ಕೋಂದ್ರಮಜಲು ,ಶ್ರೀಮತಿ ತಾರಾ ರಾಜಾರಾಮ್ ಉದ್ದಂಪಾಡಿಯವರು ಉಪಸ್ಥಿತರಿದ್ದರು. ಭಜನಾಸಮಿತಿಯ ಗೌರವಾಧ್ಯಕ್ಷರಾಗಿರುವ ಶ್ರೀಮತಿ ಜಯಶ್ರೀ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷರಾದ ರಾಮಚಂದ್ರ ಪಲ್ಲತಡ್ಕ ಕಾರ್ಯಕ್ರಮವನ್ನು ಆಯೋಜಿಸಿದರು.