ಸೋಣಂಗೇರಿ ಬಳಿ ಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿ

0

ಕಡಬ ಪೊಲೀಸ್ ಠಾಣಾ ಎ ಎಸ್ ಐ ಗೆ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯದ ಸೋಣಂಗೇರಿ ಸಮೀಪ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಕಡಬ ಪೊಲೀಸ್ ಠಾಣಾ ಎಎಸ್‌ಐ ಚಂದ್ರಶೇಖರ ಎಂಬುವರ ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.

ಬೆಳ್ಳಾರೆಯಿಂದ ಸುಳ್ಯದತ್ತ ಬರುತ್ತಿದ್ದ ರಿಟ್ಜ್ ಕಾರು ಸೋಣಂಗೇರಿ ಸಮೀಪ ಸುಳ್ಯದಿಂದ ಕಡಬ ಪೊಲೀಸ್ ಠಾಣೆಗೆ ಹೋಗುತ್ತಿದ್ದ ಎ ಎಸ್ ಐ ಚಂದ್ರಶೇಖರ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಘಟನೆಯಿಂದ ಬೈಕ್ ಸವಾರ ಎ ಎಸ್ ಐ ರವರ ಕಾಲಿಗೆ ಗಂಭೀರ ಗಾಯವಾಯಿತು. ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.
ಕಾರು ಹಳೆಗೇಟಿನ ಕಾರ್ತಿಕ್ ಎಂಬವರಿಗೆ ಸೇರಿದ್ದು ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.