ಆಲೆಟ್ಟಿಯಲ್ಲಿ ಹೈಮಾಸ್ಟ್ ಬೀದಿ ದೀಪದ ಅಳವಡಿಕೆ ಹಾಗೂ ದೇವಸ್ಥಾನಕ್ಕೆ ಹೋಗಲು ಪಾದಚಾರಿ ಮೆಟ್ಟಿಲಿನ ನಿರ್ಮಾಣ

0

ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಆಲೆಟ್ಟಿ ಪೇಟೆಯ ಕೇಂದ್ರ ಭಾಗದಲ್ಲಿ ಅಳವಡಿಸಿದ ಹೈಮಾಸ್ಟ್ ಬೀದಿ ದೀಪದ ಹಾಗೂ ಸದಾಶಿವ ದೇವಸ್ಥಾನಕ್ಕೆ ಹೋಗಲು ನಿರ್ಮಿಸಿದ ಪಾದಚಾರಿ ಮೆಟ್ಟಿಲನ್ನು ಫೆ.14 ರಂದು ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ ಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಂ.ಉಪಾಧ್ಯಕ್ಷೆ ಕಮಲ ನಾಗಪಟ್ಟಣ,
ಸದಸ್ಯ ಶಿವಾನಂದ ರಂಗತ್ತಮಲೆ, ಪ್ರಮುಖರಾದ ಕೃಪಾಶಂಕರ ತುದಿಯಡ್ಕ, ಕರುಣಾಕರ ಹಾಸ್ಪಾರೆ, ರಾಮಯ್ಯ ಗೌಡ ಗುಂಡ್ಯ, ಅಚ್ಚುತ ಮಣಿಯಾಣಿ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ,
ಲತೀಶ್ ಗುಂಡ್ಯ, ನಿತಿನ್ ಗುಂಡ್ಯ, ಸುರೇಶ್ ಆಲೆಟ್ಟಿ, ಅವಿನ್ ಆಲೆಟ್ಟಿ, ಕೃಷ್ಣ ನಾಯ್ಕ ಗಡಿಪಣೆ,ರೂಪಾನಂದ ಗುಂಡ್ಯ ಮತ್ತಿತರರು ಉಪಸ್ಥಿತರಿದ್ದರು.