ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಾರ್ಷಿಕ ದಿನದ ಅಂಗವಾಗಿ ಶನಿವಾರ ಕ್ಷೇತ್ರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಫೆ.24 ರಂದು ಬೆಳಗ್ಗೆ ೧೦೮ ಸಿಯಾಳ ಅಭಿಷೇಕ, ಹೋಮ ಸಹಿತ ೧೦೮ ಕಲಶಾರಾಧನೆ, ಕಲಶಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಮಧ್ಯಾಹ್ನ ಶ್ರೀ ದೇವರಿಗೆ ಪೂಜೆ ಪ್ರಸಾದ ವಿತರಣೆ ಜರುಗಿತು. ರಾತ್ರಿ ದೇವಳದಲ್ಲಿ ಶ್ರೀ ದೇವರ ಉತ್ಸವಗಳು ಜರುಗಿತು. ಬಳಿಕ ಕಾಶಿಕಟ್ಟೆವರೆಗೆ ಶ್ರೀ ದೇವರ ಚಿಕ್ಕ ರಥೋತ್ಸವ (ಪಂಚಮಿ) ಜರುಗಿತು. ಬಳಿಕ ಶ್ರೀ ದೇವಳದಲ್ಲಿ ಪೂಜೆ ಪ್ರಸಾದ ವಿತರಣೆ ಜರುಗಿತು. ಕ್ಷೇತ್ರದ ಪ್ರಭಾರ ತಂತ್ರಿಗಳಾದ ಸೀತಾರಾಮ ಎಡಪಡಿತ್ತಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.
ಅಲ್ಲದೆ ದೇವಾಲಯದ ಒಳಾಂಗಣದ ಅರಿ ಕೊಟ್ಟಿಲು (ನೈವೇದ್ಯ ಕೊಠಡಿ) ದುರಸ್ತಿ ಪೂರ್ಣಗೊಂಡಿದ್ದು ಅದನ್ನು ಬ್ರಹ್ಮ ಕಲಶೋತ್ಸವದ ವಾರ್ಷಿಕ ದಿನದಂದು ಲೋಕಾರ್ಪಣೆಗೊಂಡಿದೆ.