ರಾಜ್ಯ ಸರ್ಕಾರ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಮಂಡೆಕೋಲಿನ ಸದಾನಂದ ಮಾವಜಿ ನೇಮಕಗೊಂಡಿದ್ದಾರೆ. ಸದಸ್ಯರುಗಳಾಗಿ ಚಂದ್ರಶೇಖರ ಪೇರಾಲು, ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ, ಪಿ.ಎಸ್.ಕಾರ್ಯಪ್ಪ, ಡಾ. ಎನ್.ಎ. ಜ್ಞಾನೇಶ್ ಆಯ್ಕೆಯಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಂಶೋಧಕ ಡಾ. ಪುರುಷೋತ್ತ ಬಿಳಿಮಲೆಯವರನ್ನು ಸರಕಾರ ನೇಮಕಗೊಳಿಸಿ ಆದೇಶ ಮಾಡಿದೆ.