ಆಲೆಟ್ಟಿಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾತೃ ಪೂಜನಾ ವಿಶೇಷ ಕಾರ್ಯಕ್ರಮ

0

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಡೆಸಲ್ಪಡುವ ಯೋಗ ತರಬೇತಿ ಶಿಕ್ಷಣದ
ಮಾತೃ ಪೂಜನಾ ಕಾರ್ಯಕ್ರಮವು ಆಲೆಟ್ಟಿ ಶ್ರೀ ಸದಾಶಿವ ಶಾಖೆಯಲ್ಲಿ ಮಾ.17 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಜ್ರ
ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.


ಅಪರಾಹ್ನ ಯೋಗ ಬಂಧುಗಳಿಂದ ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಬಳಿಕ ಯೋಗ ಶಿಕ್ಷಕ ಜಿಲ್ಲಾ ಸಂಚಾಲಕರಾದ ಮಂಗಳೂರಿನ ಜಯರಾಮ ಹಾಗೂ ಅಶೋಕ್ ರವರು ಯೋಗ ಬಂಧುಗಳಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡರು. ಬಳಿಕ ನಡೆದ ಸಮಾರಂಭವು ಶ್ರೀಮತಿ ಜಲಜಾಕ್ಷಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅಭ್ಯಾಗತರಾಗಿ ಕೋಲ್ಚಾರು ಶಾಲೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ, ಸಮಿತಿಯ ಜಿಲ್ಲಾ ಸಂಚಾಲಕ ಅಶೋಕ್ ಮಂಗಳೂರು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಗೌರಿ ಆಲೆಟ್ಟಿ ಪ್ರಾರ್ಥಿಸಿದರು. ಶ್ರೀಮತಿ ವೇದಾವತಿ ಆಲೆಟ್ಟಿ ಸ್ವಾಗತಿಸಿದರು. ಶ್ರೀಮತಿ ಸರೋಜಿನಿ ಬಾರ್ಪಣೆ ವರದಿ ವಾಚಿಸಿದರು. ವಸಂತ ಆಲೆಟ್ಟಿ, ಸುಧಾಮ ಆಲೆಟ್ಟಿ, ನವ್ಯ ಆಲೆಟ್ಟಿ, ವೈಕುಂಠ ನಾಯಕ್ ದೋಣಿಮೂಲೆ, ಶಶಿಕಲಾ ಕುಂಚಡ್ಕ, ಯಶೋಧ ಗುಂಡ್ಯ, ಸುದರ್ಶನ ಪಾತಿಕಲ್ಲು‌ ಯೋಗಭ್ಯಾಸದ ಪ್ರಯೋಜನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಮತಿ ಯಶೋಧ ಕುಡೆಕಲ್ಲು ವಂದಿಸಿದರು.


ಶ್ರೀಮತಿ ವೀಣಾವಸಂತ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಾತೃ ಪೂಜನಾ,ಮಾತೃ ವಂದನಾ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮವು ಸಂಪ್ರದಾಯ
ಪ್ರಕಾರ ನಡೆಯಿತು. ಪುತ್ತೂರು, ಮಂಗಳೂರು,
ಸುಳ್ಯ ಬಂಟರ ಶಾಖೆಯ ಯೋಗ ಶಿಕ್ಷಕರು ಯೋಗ ಬಂಧುಗಳು ಹಾಗೂ ಸ್ಥಳೀಯರು ಭಾಗವಹಿಸಿದರು.