ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಬೃಹತ್ ಇಫ್ತಾರ್ ಸಂಗಮ ಹಾಗೂ ಸುಮಾರು ಐದು ವರ್ಷಗಳ ಕಾಲ ಪೈಚಾರ್ ಮದರಸದಲ್ಲಿ ಸೇವೆ ಸಲ್ಲಿಸಿದ ಸದರ್ ಮುಅಲ್ಲಿಮ್ ಮುಹಿಯದ್ದೀನ್ ಲತೀಫಿ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾರ್ಚ್ 28ರಂದು ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಸ್ಥಳೀಯ ಜುಮಾ ಮಸೀದಿ ಖತೀಬರಾದ ಶಮೀರ್ ನಹಿಮಿಯವರು ದುವಾ ನೆರವೇರಿಸಿ ಚಾಲನೆ ನೀಡಿದರು.
ಖುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ ನಲ್ಲಿ ಐದು ವರ್ಷಗಳ ಕಾಲ ಉತ್ತಮವಾಗಿ ಸೇವೆ ಸಲ್ಲಿಸಿದ
ಸದರ್ ಮುಹಲ್ಲಿಂರಾದ
ಮುಯ್ಯದ್ದೀನ್ ಲತೀಫೀಯವರನ್ನು ಸನ್ಮಾನಿಸಿ ಅವರ ಸೇವಾ ಅವಧಿಯನ್ನು ನೆನಪಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ನಂತರ ಸದರ್ ಉಸ್ತಾದರು ಮಾತನಾಡಿ ತನ್ನ ಸೇವೆಯ ಸಂದರ್ಭದಲ್ಲಿ ಸಹಕರಿಸಿದ ಜಮಾಅತಿನ ಎಲ್ಲರೂ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು.
ಎವೈಸಿ ಇದರ ಅಧ್ಯಕ್ಷರಾದ ಆಶ್ರಫ್ ಪೈಚಾರ್ ವಹಿಸಿದರು.
ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಶರೀಫ್ ಟಿ ಎ.ಮದರಸ ಮುಅಲ್ಲಿಂರಾದ ಹನೀಫ್ ಮದನಿ ಮಂಡೆಕೋಲು,ಮಹಮ್ಮದ್ ಸಖಾಫಿ ಎಲಿಮಲೆ,ಶಾಂತಿನಗರ ಸರ್ಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಝೀರ್ ಶಾಂತಿನಗರ,
ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷ ಡಾlಬಶೀರ್ ಆರ್ ಬಿ, ಸ್ಥಳೀಯರಾದ ಬದ್ರುದ್ದೀನ್ ಕಾವೇರಿ,ಪ್ರಗತಿ ಸೌಂಡ್ಸ್ ಮಾಲಕ ಶಾಫೀ ಪ್ರಗತಿ,ಅಲ್ ಅಮೀನ್ ಯೂತ್ ಸೆಂಟರ್ ಇದರ ಎಲ್ಲಾ ಸದಸ್ಯರುಗಳು,ಬಿಜೆಎಮ್ ಇದರ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.
ಸ್ಥಳೀಯ ಯುವಕರು ಉತ್ತಮ ರೀತಿಯಲ್ಲಿ ಸಹಕರಿಸಿದರು.
ಇಪ್ತಾರ್ ಸಂಗಮದಲ್ಲಿ
400 ಕ್ಕೂ ಅಧಿಕ ಮಂದಿ ಪಾಲ್ಗೊಂಡರು.
ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಪ್ರಧಾನ
ಕಾರ್ಯದರ್ಶಿ ಮುಜೀಬ್ ಪೈಚಾರ್
ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.