ಸುಳ್ಯ ಲಗೋರಿ ಅಸೋಸಿಯೇಷನ್ ಕಚೇರಿಗೆ ಭಾರತೀಯ ಕ್ರೀಡೆ ಮತ್ತು ಶಿಕ್ಷಣ ಕೌನ್ಸಿಲ್ ಡಾ. ಅರವಿಂದ ಚಿಟ್ಟೋದ್ಯ ಭೇಟಿ

0

ಲಗೋರಿ ಆಟವನ್ನು ಸಿಬಿಎಸ್‌ ಗೆ ಸೇರ್ಪಡೆಗೊಳಿಸಲು ಸತ ಪ್ರಯತ್ನ ನಡೆಸುವುದಾಗಿ ಭರವಸೆ

ಗ್ರಾಮೀಣ ಕ್ರೀಡೆಯಾದ ಲಗೋರಿ ಪಂದ್ಯಾಟವನ್ನು ಸ್ಕೂಲ್ ಗೇಮ್ ಫೆಡರೇಶನ್ ಗೆ ಸೇರಿಸುವ ಪ್ರಯತ್ನ ನಡೆಯುತ್ತಿದ್ದು, ಆ ಬಗ್ಗೆ ವಿಚಾರ ವಿನಿಮಯ ನಡೆಸಲು ಮತ್ತು ಆಟದ ವೀಕ್ಷಣೆ, ಕಚೇರಿ ವೀಕ್ಷಣೆಗಾಗಿ ರಾಷ್ಟ್ರೀಯ ಕ್ರೀಡೆ ಮತ್ತು ಶಿಕ್ಷಣ ಕೌನ್ಸಿಲ್ ಫೆಡರೇಷನ್ ನಿರ್ದೇಶಕರಾದ ಅರವಿಂದ್ ಚಿಟ್ಟೋದ್ಯ ದೆಹಲಿ ರವರು ಮಾರ್ಚ್ 31ರಂದು ಸುಳ್ಯ ಲಗೋರಿ ಅಸೋಸಿಯೇಷನ್ ಕಚೇರಿಗೆ ಭೇಟಿ ನೀಡಿದರು.

ಲಗೋರಿ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು ರವರ ಅಧ್ಯಕ್ಷತೆಯಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಕಚೇರಿಯಲ್ಲಿ ಅಸೋಸಿಯೇಷನ್ ಇದರ ಸಭೆ ನಡೆಯಿತು.


ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಡಾ.ಅರವಿಂದ್ ಗ್ರಾಮೀಣ ಭಾಗದಲ್ಲಿ ಜನ ಮೆಚ್ಚುಗೆ ಪಡೆದುಕೊಂಡಿರುವ ಲಗೋರಿ ಪಂದ್ಯಾಟವನ್ನು ಸಿ ಬಿ ಎಸ್ ಗೆ ಸೇರ್ಪಡೆಗೊಳಿಸುವ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು. ಅಸೋಸಿಯೇಷನ್ ರವರು ನಿರ್ಮಿಸಿರುವ ಆಟದ ನೀತಿ ನಿಯಮಾವಳಿ ಪುಸ್ತಕದ ಬಗ್ಗೆ ಮಾಹಿತಿಯನ್ನು ಪಡೆದ ಇವರು ಸಂಘಟಕರ ಕಾರ್ಯವನ್ನು ಶ್ಲಾಘಿಸಿದರು.


ಈ ಸಂದರ್ಭದಲ್ಲಿ ಅಸೋಸಿಯೇಷನ್ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಬಳಿಕ ಆಟದ ಮೈದಾನದಲ್ಲಿ ಎರಡು ತಂಡಗಳ ಪ್ರದರ್ಶನ ಪಂದ್ಯಾಟ ನಡೆಯಿತು. ಪ್ರಥಮ ಚೆಂಡನ್ನು ಎಸೆಯುವ ಮೂಲಕ ಡಾ. ಅರವಿಂದ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಕಲ್ಮಡ್ಕ ತಂಡ ಮತ್ತು ಪೆರಾಜೆ ತಂಡದ ನಡುವೆ ಮೊದಲ ಪಂದ್ಯಾಟ ನಡೆಯಿತು.


ಈ ಸಂದರ್ಭದಲ್ಲಿ ಅಸೋಸಿಯೇಷನ್ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಸೂರ್ಯ ಮೈಸೂರು, ಶ್ರೀಕಾಂತ್ ಮೈಸೂರು, ರವಿ ಕೆ ಟಿ ಮಂಡ್ಯ, ನರಸಿಂಹಲು ಮೈಸೂರು, ಸುಳ್ಯದ ಮುಖಂಡರುಗಳಾದ ನಿವೃತ್ತ ಸೇನಾನಿ ಮಾಧವ ಬಿ.ಕೆ, ಎನ್.ಎ.ರಾಮಚಂದ್ರ, ಎನ್ ಜಯಪ್ರಕಾಶ್ ರೈ, ನಿತ್ಯಾನಂದ ಮುಂಡೋಡಿ, ಶಿವರಾಮ ಏನೆಕಲ್ಲು, ಎಸ್.ಎನ್.ಮನ್ಮಥ, ಪ್ರೊ.ಬಾಲಚಂದ್ರ ಗೌಡ, ಎ.ವಿ.ತೀರ್ಥರಾಮ, ಎಂ ವೆಂಕಪ್ಪಗೌಡ, ಹರೀಶ್ ಉಬರಡ್ಕ, ರಜತ್ ಅಡ್ಕಾರು, ರಾಜು ಪಂಡಿತ್, ಎಸ್ ಸಂಸುದ್ದೀನ್, ಗೋಕುಲ್ ದಾಸ್, ಶೈಲೇಶ್ ಅಂಬೆಕಲ್ಲ, ಬಾಲಗೋಪಾಲ ಸೇರ್ಕಜೆ, ಕಿರಣ್ ನೀರ್ಪಾಡಿ, ಚಂದ್ರಶೇಖರ ನಂಜೆ, ತೀರ್ಥರಾಮ ಅಡ್ಕಬಳೆ ಮೊದಲಾದವರು ಭಾಗವಹಿಸಿದ್ದರು.

ದೊಡ್ಡಣ್ಣ ಬರಮೇಲು ಸ್ವಾಗತಿಸಿ ಸೂರ್ಯ ಮೈಸೂರು ವಂದಿಸಿದರು. ಅಸೋಸಿಯೇಷನ್ ಕಾನೂನು ಸಲಹೆಗಾರ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.