ಅಜ್ಜಾವರ ಗ್ರಾಮದ ಪಡ್ದoಬೈಲು ನ ಕೃಷಿಕ ರಾಮಚಂದ್ರ ಗೌಡರ ಮನೆಯ ಸಾಕು ನಾಯಿಯ ಮೇಲೆ ಮಾ. 30 ರ ತಡರಾತ್ರಿ 11:00 ಗಂಟೆ ಸುಮಾರಿಗೆ ಚಿರತೆ ದಾಳಿ ಮಾಡಿರುವುದಾಗಿ ತಿಳಿದುಬಂದಿದೆ.
ಮನೆಯ ಶೌಚಗೃಹದಲ್ಲಿದ್ದ ನಾಯಿ ಸುಮಾರು 11 ಗಂಟೆ ರಾತ್ರಿಗೆ ಬೊಬ್ಬಿಡುತ್ತಿದ್ದನ್ನು ಕೇಳಿ ಮನೆಯವರು ಹೊರಗೆ ಬಂದಾಗ ಚಿರತೆ ಇರುವುದು ಗೊತ್ತಾಯಿತು. ಶೌಚಾಲಯದ ಲೈಟ್ ಹಾಕಿದಾಗ ಚಿರತೆ ಓಡಿತೆಂದು ತಿಳಿದುಬಂದಿದೆ.
ನಾಯಿಯ ತಲೆಭಾಗಕ್ಕೆ ಚಿರತೆ ಕಚ್ಚಿದ್ದು, ಕಿವಿಗೆ ಗಂಭೀರ ಗಾಯವಾಗಿದೆ.
ಈ ಭಾಗದಲ್ಲಿ ಚಿರತೆಗಳ ಕಾಟ ಆಗಾಗ ಕಂಡು ಬರುತಿದ್ದು, ಇತರ ಕೆಲ ಮನೆಗಳ ಸಾಕು ನಾಯಿಗೂ ಕಚ್ಚಿರುವುದಾಗಿ ತಿಳಿದುಬಂದಿದೆ.
ಅರಣ್ಯ ಇಲಾಖೆಗೆ ಈ ಹಿಂದೆಯೇ ಮಾಹಿತಿ ನೀಡಿದರೂ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಾಮಚಂದ್ರ ಗೌಡರು ತಿಳಿಸಿದ್ದಾರೆ.
ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಕೋವಿಯನ್ನು ಡೆಪಾಸಿಟ್ ಇಡುವ ಕಾರಣ ಕಾಡು ಪ್ರಾಣಿಗಳಿಂದ ಆಗುವ ಕಿರುಕುಳಕ್ಕೆ ಯಾರು ಹೊಣೆ ಎಂದು ಸಂಬಂಧಪಟ್ಟ ಇಲಾಖೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.