ಕುಂಚಡ್ಕದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ರಂಜಿಸಿದಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆ
ಪ್ರಥಮ – ಮುಳ್ಳೇರಿಯ, ದ್ವಿತೀಯ-ದುಗಲಡ್ಕ

ಆಲೆಟ್ಟಿ ಗ್ರಾಮದ ಕುಂಚಡ್ಕದಲ್ಲಿ
ವರ್ಷಂಪ್ರತಿ ಜರುಗುವ
ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.1 ಮತ್ತು 2 ರಂದು ಒತ್ತೆಕೋಲ ಸಮಿತಿಯ ಆಶ್ರಯದಲ್ಲಿ ಜರುಗಿತು.

ಎ.1 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಶುದ್ಧಿ ಕಲಶವಾಯಿತು. ಬಳಿಕ ಭಾರತೀಯ
ತೀಯ ಸಮಾಜ ಬಾಂಧವರ ನೇತೃತ್ವದಲ್ಲಿ ಮೇಲೇರಿಗೆ ಅಗ್ನಿಕುಂಡ ಜೋಡಣೆಯ ಕಾರ್ಯ ನೆರವೇರಿತು.

ರಾತ್ರಿ ಕುಂಚಡ್ಕ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದು ನಡೆದು ನಂತರ ಭಂಡಾರ ತೆಗೆದು ಒತ್ತೆಕೋಲದ ಮಜಲಿಗೆ ದೈವದ ಪಾತ್ರಿಗಳ ನೇತೃತ್ವದಲ್ಲಿ ಭಂಡಾರ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶವಾಯಿತು.
ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಪ್ರಸಾದ ವಿತರಣೆಯಾಯಿತು.
ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಮರುದಿನ ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶವಾಗಿ ಪ್ರಸಾದವಿತರಣೆಯಾಯಿತು.ಆಗಮಿಸಿದಭಕ್ತಾದಿಗಳಿಂದಹರಕೆಸಮರ್ಪಣೆ ಹಾಗೂ ಮಾರಿಕಳ ಪ್ರವೇಶವಾಗಿ ಒತ್ತೆಕೋಲವು ಸಮಾಪನಗೊಂಡಿತು. ಕುಂಚಡ್ಕ ಕುಟುಂಬದ ಹಿರಿಯರು ಹಾಗೂ ‌ಕಿರಿಯರು ಎಲ್ಲಾ ಭಕ್ತಾದಿಗಳನ್ನು ಸ್ವಾಗತಿಸಿದರು. ಭಾರತೀಯ ತೀಯ ಸಮಾಜ ಬಾಂಧವರು ಸಹಕರಿಸಿದರು.

ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟದ ಸಮಾರಂಭ:

ರಾತ್ರಿ ಕುಂಚಡ್ಕ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಹಾಗೂ ಬಾರ್ಪಣೆ ವಿಕ್ರಮ ಯುವಕ ಮಂಡಲದ ಸಹಯೋಗದಲ್ಲಿ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಒತ್ತೆಕೋಲ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಂಚಡ್ಕ ಕುಟುಂಬದ ಹಿರಿಯರಾದ ದೊಡ್ಡಯ್ಯ ಗೌಡ ಕುಂಚಡ್ಕ ರವರು ಪಂದ್ಯಾಟದ ಅಂಗಣವನ್ನು ಉದ್ಘಾಟಿಸಿದರು. ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ , ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕರವರು ಸ್ಪರ್ಧಿಗಳಿಗೆ ಶುಭ ಹಾರೈಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ
ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು, ದಿನೇಶ್ ಕಣಕ್ಕೂರು, ಕುಂಚಡ್ಕ ಐನ್ ಮನೆಯ ಆಡಳಿತ ಸಮಿತಿ ಗೌರವಾಧ್ಯಕ್ಷ ಪೂವಯ್ಯ ಗೌಡ ಕುಂಚಡ್ಕ,ವಿಕ್ರಮ ಯುವಕ ಮಂಡಲದ ಅಧ್ಯಕ್ಷ ವಿನಯ ಕುಮಾರ್ ರೈ,ಗೌರವಾಧ್ಯಕ್ಷ ಪ್ರಶಾಂತ್ ಕೋಲ್ಚಾರು, ವಸಂತ ಬಾಳೆಹಿತ್ಲು, ಅಶ್ವಿನ್ ಅಡ್ಪಂಗಾಯ, ದಕ್ಷಿತ್ ಬಾಳೆಹಿತ್ಲು ಉಪಸ್ಥಿತರಿದ್ದರು.
ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರ್ವಹಿಸಿದರು.

ಪುರುಷರ 550 ಕೆ.ಜಿ ವಿಭಾಗದಲ್ಲಿ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯು ಅತ್ಯಂತ ಕುತೂಹಲಕಾರಿಯಾಗಿ ಬೆಳಗ್ಗಿನ ಜಾವದ ತನಕ ನಡೆಯಿತು. ಸುಮಾರು 20 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕೇರಳದ ಮುಳ್ಳೇರಿಯ ತಂಡ ಪ್ರಥಮ ಸ್ಥಾನ ಹಾಗೂ ದುಗಲಡ್ಕ ‌ತಂಡ ದ್ವಿತೀಯ ‌ಬಹುಮಾನ ಪಡೆದುಕೊಂಡಿತು. ಒತ್ತೆಕೋಲ ಸಮಿತಿಯ ಪದಾಧಿಕಾರಿಗಳು, ಕುಂಚಡ್ಕ ಕುಟುಂಬದ ಹಿರಿಯ ಕಿರಿಯ ‌ಸದಸ್ಯರು ಹಾಗೂ ವಿಕ್ರಮ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.