ಎ.16ರಿಂದ 22ರವರೆಗೆ ಪೆರಾಜೆಯಲ್ಲಿ ಈಜು ತರಬೇತಿ ಶಿಬಿರ

0

ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಹಾಗೂ ಚಿಗುರು ಯುವಕ ಮಂಡಲ ಪೆರಾಜೆ ಇದರ ಆಶ್ರಯದಲ್ಲಿ ಈಜು ತರಬೇತಿ ಶಿಬಿರವು ಎಪ್ರಿಲ್ 16ರಿಂದ ಆರಂಭಗೊಂಡು 22ರವರೆಗೆ ನಡೆಯಲಿದೆ.


ರಾಷ್ಟ್ರಮಟ್ಟದ ಈಜು ತರತಬೇತುದಾರರು ತರಬೇತಿ ನೀಡಲಿದ್ದು, ಪ್ರತೀ ದಿನ ಪೂ.ಗಂಟೆ 11ರಿಂದ 12.30ರವರೆಗೆ ಪೆರಾಜೆಯ ಪಯಸ್ವಿನಿ ಸೇತುವೆಯ ಬಳಿ ತರಬೇತಿ ನಡೆಯುವುದು.

6 ವರ್ಷದಿಂದ ಮೇಲ್ಪಟ್ಟವರು ತರಬೇತಿಯಲ್ಲಿ ಭಾಗವಹಿಸಬಹುದೆಂದು ಸಂಘಟಕರು ತಿಳಿಸಿದ್ದಾರೆ. ಈಜು ಅತ್ಯುತ್ತಮವಾದ ವ್ಯಾಯಾಮವಾಗಿದ್ದು ಆರೋಗ್ಯ ಸದೃಢವಾಗಿಡಲು ಈಜು ಪರಿಣಾಮಕಾರಿ. ಈಜುವುದರಿಂದ ಹಲವು ಪ್ರಯೊಜನಗಳನ್ನು ಪಡೆಯಬಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸುರೇಶ್ ಪೆರುಮುಂಡ (9448409564), ಭುವನ್ ಕುಂಬಳಚೇರಿ (8762195187), ಯುವಾನಂದ ಪೆರಂಗಜೆ (9448768830), ಜೀವನ್ ಮಜಿಕೋಡಿ (7259898368)