ಎ.9-17 : ಕಾಯರ್ತೋಡಿ ದೇವಳದ ವಠಾರದಲ್ಲಿರಂಗಮಯೂರಿ ಕಲಾ ಶಾಲೆಯ ರಾಜ್ಯ ಮಟ್ಟದ “ಬಣ್ಣ” ಶಿಬಿರ

0

ಸುಳ್ಯದ ಶ್ರೀರಾಂಪೇಟೆಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಲೋಕೇಶ್ ಊರುಬೈಲು ರವರ ಸಾರಥ್ಯದ ರಂಗ ಮಯೂರಿ ಕಲಾ ಶಾಲೆಯ ಆಯೋಜನೆಯಲ್ಲಿ ಎ.9 ರಿಂದ 17 ರ ತನಕ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ರಾಜ್ಯ ಮಟ್ಟದ “ಬಣ್ಣ” ಬೇಸಿಗೆ ಶಿಬಿರವು ನಡೆಯಲಿರುವುದು.

ಶಿಬಿರದಲ್ಲಿ ಮಕ್ಕಳ ಆಯ್ಕೆಗೆ ಅನುಗುಣವಾಗಿ ಎಲ್ಲಾ ಸ್ತರದ ಕಲಾ ಪ್ರಕಾರಗಳ ತರಬೇತಿ. ಜತೆಗೆಮಕ್ಕಳಿಗೆ ಮಾನಸಿಕ ಮತ್ತು ಬೌದ್ಧಿಕತೆಯ ಜತೆಗೆ ಶಿಕ್ಷಣದ ಬೆಳವಣಿಗೆಗೆ ಪೂರಕ ವಿಚಾರಗಳ ಬೋಧನೆಯು ನಡೆಯಲಿದೆ. ಮಕ್ಕಳ ಕಲಿಕೆಗೆ ಪೂರಕವಾದ ಪ್ರಶಾಂತ ವಾತಾವರಣದಲ್ಲಿ ತಮ್ಮ ಮನಸ್ಸಿನಲ್ಲಿರುವ ಹಾಗೂ ಆಸಕ್ತಿಯ ಎಲ್ಲಾ ಕಲಾ ಪ್ರಕಾರಗಳ ತರಬೇತಿಯು ನುರಿತ ರಾಜ್ಯ ಮಟ್ಟದ ಹೆಸರಾಂತ ಸಂಪನ್ಮೂಲ ಕಲಾವಿದರಿಂದ ಪ್ರಾತ್ಯಕ್ಷಿಕೆಯೊಂದಿಗೆ ಮೇಳೈಸಲಿರುವುದು.


ಕಲಿಕೆಗೆ ಬರುವ ಮಕ್ಕಳಿಗೆ ಶುಚಿ ರುಚಿಯಾದ ಊಟ ಉಪಹಾರದ ವ್ಯವಸ್ಥೆ. ಪ್ರತಿಯೊಬ್ಬ ಮಗುವಿನ ಬಗ್ಗೆ ಮುತುವರ್ಜಿ ವಹಿಸಿ ಕೊಂಡು ಪೋಷಣೆ ಮಾಡುವ ರಂಗ ಮಯೂರಿಯ ಪೋಷಕ ಕಮಿಟಿಯ ಸದಸ್ಯರು ಸಹಕರಿಸಲಿದ್ದಾರೆ.

ದೇಸಿಯತೆಯ ಜತೆಗೆ ಕಲಿಕೆ ಮತ್ತು ಪ್ರಾತ್ಯಕ್ಷಿಕೆಯನ್ನು ಶಿಬಿರದಲ್ಲಿ ಅಳವಡಿಸಿಕೊಳ್ಳಲಾಗುವುದು.ಮರೆತು ಹೋದ ದೇಸೀ ಬದುಕನ್ನು ನೆನಪಿಸುವುದು.


ಪ್ರಕೃತಿಯೊಡನೆ ಬೆರೆತು ಹಾಡು,ನಗು ಖುಷಿಯೊಂದಿಗೆ ಸಹಬೋಜನದ ಕ್ಷಣಗಳು.


ಹಿಂದೆ ನಮ್ಮ ಹಿರಿಯರು ಪ್ರಕೃತಿಯನ್ನೇ ನಂಬಿ ಅದನ್ನೇ ಪೂಜಿಸಿ,ಪರಿಸರದಲ್ಲಿ ಸಿಗುವ ಬಿದಿರು,ಬೆತ್ತವನ್ನು ಉಪಯೋಗಿಸಿ ಗೃಹ ಬಳಕೆಗೆ,ಕೃಷಿಗೆ,ಮನರಂಜನೆಗೆಉಪಯೋಗಿಸುತ್ತಿದ್ದರು.ಈಗ ಎಲ್ಲವೂ ಕೃತಕ ವಾಗಿದೆ. ಹಾಗಾಗಿ ಆ ಬದುಕನ್ನು ನೆನಪಿಸುವುದು.


ಒಂದು ಹಂತದಲ್ಲಿ ನಾವೆಲ್ಲರೂ ಆಧುನೀಕರಣಕ್ಕೆ ಮಾರುಹೋಗಿದ್ದೆವು. ಆದರೆ ಈಗ‌ ಮತ್ತೆ ಆಧುನೀಕರಣದಿಂದ ಹಳ್ಳಿಯ ಗ್ರಾಮ್ಯದ ಕಡೆ ಮರಳುತ್ತಿದ್ದೇವೆ. ಮಕ್ಕಳಿಗೆ ಹಳ್ಳಿಯ ಬದುಕನ್ನು ಮತ್ತೆ ನೆನಪಿಸಿ ಕೊಡುವುದೇ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ಸಂಚಾಲಕ ಲೋಕೇಶ್ ಊರುಬೈಲು ತಿಳಿಸಿದರು.

7 ರಿಂದ 17 ರ ವಯೋಮಿತಿಯ ಮಕ್ಕಳ ರಂಗ ಶಿಬಿರವು ರಂಗಮಯೂರಿಯ ಶಿಕ್ಷಕರ ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ನೇತೃತ್ವದಲ್ಲಿ ಸುಂದರವಾದ ಪರಿಸರದಲ್ಲಿ ನಡೆಯಲಿದ್ದು ಶಿಬಿರದ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ.

ಹೆಚ್ಚಿನ ‌ಮಾಹಿತಿಗಾಗಿ 9611355496, 6363783983 ಸಂಪರ್ಕಿಸುವಂತೆ ತಿಳಿಸಿದ್ದಾರೆ.