ಸಂತ ರೀತಾ ಚರ್ಚ್ ಪಂಜ, ಲಯನ್ಸ್ ಕ್ಲಬ್ ಪಂಜ, ಜೇಸಿಏ ಪಂಜ ಪಂಚಶ್ರೀ,ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ ಉದ್ಘಾಟನೆ
ಏ.7 ರಂದು ಪಂಜ ಸಂತ ರೀತಾ ಚರ್ಚ್ ಹಾಲ್ ನಲ್ಲಿ ನಡೆಯಿತು.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸಿದರು.ಸಂತ ರೀತಾ ಚರ್ಚ್ ಧರ್ಮಗುರು ವಂದನೀಯ
ಫಾದರ್ ಅಮಿತ್ ರೊಡ್ರಿಗಸ್ ಸಭಾಧ್ಯಕ್ಷತೆ ವಹಿಸಿದ್ದರು.ಪುತ್ತೂರು ನೆಮ್ಮದಿ ವೆಲ್ ನೆಸ್ ಮಾಲಕ ಕೆ.ಪ್ರಭಾಕರ ಸಾಲ್ಯಾನ್ ಮಾಹಿತಿ ನೀಡಿದರು.ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಸೆಲಿನಾ ಡಿ’ಸೋಜ,ಪಂಜ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಜೇಸಿಐ ಪಂಜ ಪಂಚಶ್ರೀ ಉಪಾಧ್ಯಕ್ಷ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ .ಪ್ರಭಾಕರ ಸಾಲ್ಯಾನ್
ಸ್ವಾಗತಿಸಿದರು.ಸೆಲಿನಾ ಡಿ’ಸೋಜ ವಂದಿಸಿದರು.