ಕೆ. ವಿ. ಜಿ. ಐ. ಪಿ. ಎಸ್. ಮಕ್ಕಳ ಬೇಸಗೆ ಶಿಬಿರ ನಮಾರೋಪ

0

2023-24 ನೇ ಸಾಲಿನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಕೆವಿಜಿ ಐಪಿಎಸ್ ನಲ್ಲಿ ಜರುಗಿತು.

ಶಿಬಿರಾರ್ಥಿಗಳು ಬೇಸಿಗೆ ಶಿಬಿರದ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರಲ್ಲದೆ ಶಿಬಿರದಲ್ಲಿ ಕಲಿತ ನೃತ್ಯವನ್ನು ಪ್ರದರ್ಶಿಸಿದರು.

ಬೇಸಿಗೆ ಶಿಬಿರದಲ್ಲಿ ಮಕ್ಕಳು ನಟನೆ ಹಾಡು ಅಭಿನಯ ನೃತ್ಯ ,ಆರ್ಟ್ ಕ್ರಾಫ್ಟ್, ಸ್ವಿಮ್ಮಿಂಗ್, ಆಟಗಳು, ಕಸದಿಂದ ರಸ ಬೆಂಕಿ ರಹಿತ ಅಡುಗೆ, ಎಂಬ್ರಾಯಿಡರಿ, ಮಣ್ಣಿನ ಕಲಾಕೃತಿ, ಗೂಡು ದೀಪ ಹೀಗೆ ವೈವಿಧ್ಯಮಯ ಕಲೆಗಳನ್ನು, ನುರಿತ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಬೆರೆತು ಕಲಿತುಕೊಂಡರು.

ಮಕ್ಕಳಿಗೆ ಪ್ರಾಂಶುಪಾಲರಾದ ಅರುಣ್ ಕುಮಾರ್ ಅಭಿನಂದನಾ ಪತ್ರಗಳನ್ನು ನೀಡಿ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.