ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಸಾಮೂಹಿಕ ಚಾಂದ್ರಮಾನ ಯುಗಾದಿ ಆಚರಣೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಸಭಾ ಭವನದಲ್ಲಿ ನಡೆಯಿತು.
ವೇ|ಮೂ| ಹರೀಶ್ ಭಟ್ ಅವರು ಶ್ರೀಲಕ್ಷ್ಮೀಸಹಿತ ಸತ್ಯನಾರಾಯಣ ಪೂಜೆ ಮತ್ತು ಪಂಚಾಂಗ ಪಠಣ ನಡೆಸಿ, ಯುಗಾದಿ ಫಲದ ಬಗ್ಗೆ ತಿಳಿಸಿದರು.
ಬಳಿಕ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಅಂಗದ ಸಂಧಾನ ಪ್ರಸಂಗ ನಡೆಯಿತು. ಭಾಗವತಿಕೆಯಲ್ಲಿ ಪುತ್ತೂರು ರಮೇಶ್ ಭಟ್, ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಪದ್ಯಾಣ ಜಯರಾಮ ಭಟ್ ,ಅಂಗದನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಪ್ರಹಸ್ತನಾಗಿ ಶಂಭು ಶರ್ಮ ವಿಟ್ಲ, ಶ್ರೀರಾಮನಾಗಿ ರಾಮ ಜೋಯಿಸ ಬೆಳ್ಳಾರೆ ಪಾತ್ರ ನಿರ್ವಹಿಸಿದರು.
ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಪಾಲೆಪ್ಪಾಡಿ ಡಾ| ಬಾಲಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಕೃಷ್ಣ ರಾವ್ ಕೆ.ಆರ್., ಉಪಾಧ್ಯಕ್ಷರಾದ ಶ್ರೀಕೃಷ್ಣ ಎಂ.ಎನ್. ಮತ್ತು ಪದ್ಮನಾಭ ಭಟ್ ಕನಕಮಜಲು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.