ಸಂಪಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಬಣ ಮರೆತು ಒಂದಾದ ನಾಯಕರು : ಪಕ್ಷ ಗೆಲುವಿಗೆ ದುಡಿಯಲು ಪಣ

ಸಂಪಾಜೆ ಗ್ರಾಮದ ಕಾಂಗ್ರೆಸ್ ನಾಯಕರು  ಹಲವು ತಿಂಗಳುಗಳ ಹಿಂದೆ ಪಂಚಾಯತ್ ನ ಆಡಳಿತ ವಿಷಯದಲ್ಲಿ ಒಮ್ಮತದ ಅಭಿಪ್ರಾಯವಿಲ್ಲದೆ ಎರಡು ಬಣಗಳಾಗಿ ಬೇರ್ಪಟ್ಟಿದ್ದರು.  ಇದನ್ನು ಸರಿಪಡಿಸಲು ತಾಲೂಕು ಹಾಗೂ ಜಿಲ್ಲಾ ಕಾರ್ಯಕರ್ತರು ಬಂದು ಪ್ರಯತ್ನಿಸಿದರೂ ಫಲಪ್ರದವಾಗಿರಲಿಲ್ಲ. ಆದರೆ  ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಎ.13 ರಂದು ಸಂಪಾಜೆಯಲ್ಲಿ  ನಡೆದ  ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭೇದ ಮರೆತು ಎಲ್ಲ ನಾಯಕರು ಒಂದಾಗಿ ಭಾಗವಹಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪಣ ತೊಟ್ಟರು. ಆದರೆ ಸಂಪಾಜೆಯ ಕಾಂಗ್ರೆಸ್ ನಾಯಕ  ಸೋಮಶೇಖರ ಕೊಯಿಂಗಾಜೆಯವರು ಮಾತ್ರ ಸಭೆಗೆ ಬಾರದೆ ಅಂತರ ಕಾಯ್ದುಕೊಂಡರು. 




ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷ ಎ. ಕೆ. ಇಬ್ರಹಿಂ ನೇತೃತ್ವದಲ್ಲಿ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಭಾಭವನದಲ್ಲಿ ಸಭೆ ನಡೆಸಲಾಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದಿನ ಕಹಿ ಘಟನೆಗಳನ್ನು ಮರೆತು ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲಿಸಬೇಕೆಂದರು. ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಾಹಿದ್ ಅವರು ಮಾತನಾಡಿ, ಸೋಮಶೇಖರ ಕೊಯಿಂಗಾಜೆ ನೇತೃತ್ವದಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅವರ ಬೆನ್ನಿಗೆ ಬೆಂಬಲವಾಗಿ ನಿಂತು ಸಹಕರಿಸಬೇಕು. ಅವರಿಗೆ ಉತ್ತಮ ಮುಂದಾಳತ್ವದ ಭವಿಷ್ಯವಿದೆ. ಬೇರೆ ಬೇರೆ ಜನರು ಅವರಲ್ಲಿಗೆ ಹೋಗಿ ದೂರನ್ನು ನೀಡಿ ಅವರ ಮಾನಸಿಕ ಒತ್ತಡವನ್ನು ಜಾಸ್ತಿಮಾಡಬೇಡಿ ಎಂದು ಸಭೆಗೆ ತಿಳಿಸಿದರು.


ಸಭೆಯನ್ನು ಉದ್ದೇಶಿಸಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಎನ್. ಜಯಪ್ರಕಾಶ್ ರೈ, ಜಿಲ್ಲಾ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಆಮ್ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಶೋಕ್ ಎಡಮಲೆ, ಲಕ್ಷ್ಮೀಶ ಗಬ್ಲಡ್ಕ, ಸುಳ್ಯದ ಉಸ್ತುವಾರಿ ಎಂ. ವೆಂಕಪ್ಪ ಗೌಡ, ಕಾರ್ಮಿಕ ಸಂಘದ ಮುಂದಾಳು ಕೆ.ಪಿ.ಜಾನಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಮಾಜಿ ಗ್ರಾ.ಪಂ.ಅಧ್ಯಕ್ಷೆ ಬಿ.ಎಸ್.ಯಮುನಾ ಉಪಸ್ಥಿತರಿದ್ದರು. ಮಾಜಿ ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್, ರಾಜು ನೆಲ್ಲಿಕುಮೇರಿ, ಎ.ಕೆ.ಇಬ್ರಾಹಿಂ, ಶೌವಾದ್ ಗೂನಡ್ಕ, ಎಸ್. ಕೆ. ಹನೀಫ್, ಮಾಜಿ ಗ್ರಾ.ಪಂ.ಅಧ್ಯಕ್ಷರುಗಳಾದ ಸುಂದರಿ ಮುಂಡಡ್ಕ ಮತ್ತು ಕೆ.ಆರ್.ಜಗದೀಶ್ ರೈ, ಪುಟ್ಟಯ್ಯ ಗೌಡ ಪೆರುಂಗೋಡಿ, ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ವಿಮಲಾ, ಕಾಂತಿ ಬಿ.ಎಸ್, ಸುಶೀಲ, ವಿಜಯಕುಮಾರ್, ಜುನೈದ ಪೇರಡ್ಕ, ಜುಬೈದ ಪೇರಡ್ಕ, ಎನ್. ಎಸ್. ಯು. ಐ.ಪ್ರಧಾನ ಕಾರ್ಯದರ್ಶಿ ಉಬೈದ ಗೂನಡ್ಕ, ಸೆಬಾಸ್ಟಿನ್ ನೆಲ್ಲಿಕುಮೇರಿ, ಶಿವಲಿಂಗ ಎರುಕಡ್ಪು, ಕೃಷ್ಣಪ್ರಸಾದ್, ವಸಂತ್ ಗೌಡ ಮೊದಲಾದವರು ಉಪಸ್ಥಿತರಿದ್ದರು. ಲೂಕಾಸ್ ಟಿ. ಐ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.