ರಕ್ತದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಹಾಗೂ ಸುಳ್ಯ ನಗರದ ವತಿಯಿಂದ ಸುಳ್ಯ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಹಾಗೂ ಸುಳ್ಯ ನಗರದ ವತಿಯಿಂದ ರಕ್ತದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಯ ಬಗ್ಗೆ
ಸುಳ್ಯ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ
ಕೊಡಲಾಯಿತು.
ರಕ್ತದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಯನ್ನು ಹರೀಶ್ ಪೆರಾಜೆ ಎನ್ನುವ ವ್ಯಕ್ತಿ ತನ್ನ ಫೇಸ್ಬುಕ್ ಅಕೌಂಟಿನಲ್ಲಿ ಮಂಗಳೂರು ಕಡೆ ರಕ್ತದಾನ ಪಡೆಯುವಾಗ ಮುಂಜಾಗ್ರತೆ ಇರಲಿ ಆ ಭಾಗದಲ್ಲಿ ಕೇಸರಿ ರಕ್ತದವರು ಇದ್ದಾರೆ ಅಂತೆ ಇದು ಏಡ್ಸ್ ರೋಗಿಯ ರಕ್ತಕ್ಕಿಂತ ಮಾರಕ) ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಮೂಲಕ ರಕ್ತದಾನಿಗಳಿಗೆ ಹಿಂದೂ ಸಂಘಟನೆ ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ ಕೊಡಲಾಯಿತು. ಈ ಸಂದರ್ಭ ವಿಎಚ್.ಪಿ ಸುಳ್ಯ ಪ್ರಖಂಡ ಅಧ್ಯಕ್ಷರು ಸೋಮಶೇಖರ್ ಪೈಕ,ಕಾರ್ಯದರ್ಶಿ ನವೀನ್ ಎಲಿಮಲೆ, ವಿ.ಎಚ್.ಪಿ ಸುಳ್ಯ ನಗರ ಉಪಾಧ್ಯಕ್ಷರು ಮನೋಜ್ ಕುಮಾರ್, ಬಜರಂಗದಳ ನಗರ ಸಂಚಾಲಕರು ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಯಾದವ್,ಕಿರಣ್ ಬೆಟ್ಟಂಪಾಡಿ,ಮಿಥುನ್ ಸುಳ್ಯ, ನೂತನ್ ಚೆಮ್ನೂರು, ಉಪಸ್ಥಿತರಿದ್ದರು.