ಕೊಡಿಯಾಲ ಗ್ರಾಮದ ಮರಿಕೇಯಿ ಮಹಾಬಲ ಮಾರ್ಲರವರು ಅಲ್ಪಕಾಲದ ಅಸೌಖ್ಯದಿಂದ ಎ.24 ರಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಪ್ರಗತಿಪರ ಕೃಷಿಕರಾಗಿದ್ದ ಅವರು ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಪುತ್ರ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಂ.ರಮೇಶ್ ಮಾರ್ಲ, ಪುತ್ರಿ ಹೇಮಲತಾ ಮರುವಂಜ, ಅಳಿಯ ವಿಶ್ವನಾಥ ರೈ ಮರುವಂಜ, ಸೊಸೆಯಂದಿರಾದ ರತ್ನಾವತಿ, ಮನುಶಂಕರಿ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.