ಆಲೆಟ್ಟಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಜ್ಯೋತಿಷ್ಯರಾಗಿದ್ದ ಗಬ್ಬಲ್ಕಜೆ ದಿ. ಕೆ.ಶಿವಪ್ಪ ಗೌಡ ಮತ್ತು ದಿ.ಎ.ಎಸ್.ಲಕ್ಷ್ಮೀ ದಂಪತಿಯ ಪುತ್ರ ಪಶು ಸಂಗೋಪನಾ ಇಲಾಖೆಯ ನಿವೃತ್ತ ಉದ್ಯೋಗಿ ಗಬ್ಬಲ್ಕಜೆ ಡಾ.ಶಿವಾನಂದ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಎ.14 ರಂದು ಮಂಗಳೂರಿನ ಕಾವೂರು ಗಾಂಧಿನಗರದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಮೃತರು ಸಹೋದರರಾದ ಚಿನ್ಮಯ ಗಬ್ಬಲ್ಕಜೆ, ಹರಿಪ್ರಸಾದ್ ಗಬ್ಬಲ್ಕಜೆ, ಸಹೋದರಿಯರಾದ ಸುಶೀಲಾ, ಇಂದಿರಾ, ದೇವಕಿ, ರುಕ್ಮಿಣಿ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಪಶು ಸಂಗೋಪನಾ ಇಲಾಖೆಯ ಲ್ಲಿಧಾರವಾಡ,ಹಾಸನ, ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಜಿಲ್ಲಾ ಪಶು ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದರು. ಆಲೆಟ್ಟಿ (ನಾರ್ಕೋಡು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಂದರವಾದ ರಂಗಮಂದಿರವನ್ನು ಗಬ್ಬಲ್ಕಜೆ ದಿ.ಕೆ.ಶಿವಪ್ಪ ಗೌಡ ರವರ ಹೆಸರಿಸಲ್ಲಿ ಕೊಡುಗೆಯಾಗಿ ನೀಡುವ ಮೂಲಕ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಪ್ರಸ್ತುತ ಮಂಗಳೂರಿನ ಕಾವೂರಿನ ಬೆನಕ ನಿಲಯದಲ್ಲಿ ವಾಸವಾಗಿದ್ದರು.