ಕಡಬ ತಾಲೂಕಿನ ಹೇಮಳ ಬೂತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೂತ್ ಮತ್ತು ಪೋಲಿಂಗ್ ಏಜೆಂಟ್ ಇಲ್ಲದಿರುವ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ನ್ಯೂಸ್ ಪ್ರಕಟಗೊಂಡಿತ್ತು. ಇದನ್ನು ಗಮನಿಸಿದ ಕಾಂಗ್ರೆಸ್ ನಾಯಕರು ತಕ್ಷಣ ಕಾರ್ಯಕರ್ತರನ್ನು ಬೂತ್ ನಲ್ಲಿ ನೇಮಿಸಿದರಲ್ಲದೆ, ಪೋಲಿಂಗ್ ಏಜೆಂಟ್ ರನ್ನು ನೇಮಿಸಿರುವುದಾಗಿ ವರದಿಯಾಗಿದೆ.