ದುಗ್ಗಲಡ್ಕದ ಶ್ರೀ ದುಗ್ಗಲಾಯ ದೇವಸ್ಥಾನದ ಎದುರು ಭಾಗದಲ್ಲಿ ಅಳವಡಿಸಲಾಗಿದ್ದ ಘಂಟೆಯನ್ನು ನಿನ್ನೆ ರಾತ್ರಿ ಕಳವುಗೈದಿದ್ದಾರೆ.ಸುಮಾರು 30 ಸಾವಿರ ಮೌಲ್ಯದ ಒಂದು ಕಂಚಿನ ಘಂಟೆಯನ್ನು ನಿನ್ನೆ ರಾತ್ರಿ ಕಳ್ಳರು ಕೊಂಡೊಯ್ದಿದ್ದಾರೆ. ದೈವಸ್ಥಾನಕ್ಕೆ ಆಗಮಿಸಿದ ಭಕ್ತರೋರ್ವರಿಗೆ ವಿಷಯ ತಿಳಿದು ಆಡಳಿತ ಸಮಿತಿಯವರಿಗೆ ತಿಳಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಸುಂದರ ರಾವ್, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್, ದಿನೇಶ್ ಡಿ.ಕೆ.ಆಗಮಿಸಿ ಪರಿಶೀಲಿಸಿ ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.