ನಾಲ್ಕೂರು : ನಡುಗಲ್ಲಿನಲ್ಲಿ ನಡೆದ ಸ್ವರ್ಣರಾಶಿ ಪ್ರಶ್ನೆ

0

ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ಮೇ. 1 ರಂದು ಸ್ವರ್ಣ ರಾಶಿ ಪೂಜೆ, ಪ್ರಶ್ನೆ ನಡೆಯಿತು.

ಸ್ವರ್ಣ ಪೂಜೆ ನಡೆಸಿ ಬಳಿಕ ಪ್ರಶ್ನೆ ಇರಿಸಲಾಗಿದು ಪುರಾತನ ಕಾಲದಲ್ಲಿ ಇಲ್ಲಿ ದೇವಾಲಯ ಗರ್ಭ ಗುಡಿ, ತೀರ್ಥ ಮಂಟಪ, ರಾಜಾಂಗಣ ಇತ್ತೆಂದು ತಿಳಿದು ಬಂದಿದೆ. ಯಾವ ಸ್ಥಳದಲ್ಲಿ ದೇವಾಲಯ ಇತ್ತು, ಇಲ್ಲಿ ಇದ್ದ ದೇವರು ಯಾವುದು ಇನ್ನಷ್ಟೆ ತಿಳಿದು ಬರಬೇಕಾದ ವಿಚಾರವಾಗಿದೆ. ಮುಂದುವರೆದ ಭಾಗವಾಗಿ ಮೇ.20 ರಿಂದ ಮೂರು ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ನಡೆಯಲಿದೆ ಎಂದು ತಿಳಿದು ಬಂದಿದೆ.

ನಾಲ್ಕೂರಿನ ಗ್ರಾಮದಲ್ಕಿ ಇನ್ನೊಂದು ಗ್ರಾಮ ದೇವರು ಶಿವ ಕ್ಷೇತ್ರವಿದೆ ಎಂಬುದು ಹಲವು ವರ್ಷಗಳಿಂದ ಜನ ಜನಿತವಾಗಿರುವ ವಿಚಾರ.

ಯಾಕೆಂದರೆ ನಾಲ್ಕೂರಿನ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ 25 ವರ್ಷಗಳ ಹಿಂದೆ ಪ್ರಶ್ನಾ ಚಿಂತಣೆ ನಡೆದಿದ್ದಾಗ ನಾಲ್ಕೂರಿನಲ್ಲಿ ಇನ್ನೊಂದು ಗ್ರಾಮ ದೇವರು ಇದ್ದು ಅದು ಶಿವನ ಸಾನಿದ್ಯವಿರುವ ಕ್ಷೇತ್ರ ಎಂದು ಹೇಳಲಾಗಿತ್ತು. ಅಲ್ಲದೇ ಆ ವೇಳೆ ಅದಕ್ಕಾಗಿ ವಿಶೇಷ ಕ್ಷೇತ್ರಾಭಿವೃದ್ದಿ ವಿಚಾರವಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಇದಲ್ಲದೆ ಉತ್ರಂಬೆಯ ಉಳ್ಳಾಕುಲು, ಹಲ್ಗುಜಿಯ ಶ್ರೀ ಶಿರಾಡಿ ದೈವಸ್ಥಾನ ಮತ್ತಿತರ ದೈವಗಳ ಕ್ಷೇತದ ಪ್ರಶ್ನೆಯಲ್ಲೂ ಶಿವ ಸಾನಿದ್ಯವಿರುವ ಬಗ್ಗೆ ಬಲವಾಗಿ ಕಂಡು ಬಂದಿದೆ. ಅಲ್ಲದೆ ನಾಲ್ಕೂರಿನ ಹಲವು ಇತರೇ ಕ್ಷೇತ್ರ, ಖಾಸಗಿಯಾಗಿಯೂ ಪ್ರಶ್ನೆಗಳನ್ನಿಟ್ಟಾಗ ಕಂಡು ವಿಚಾರವೆಂದರೆ ನಾಲ್ಕೂರು ನಲ್ಲಿ ಶಿವ ಕ್ಷೇತ್ರವಿದೆ ಎಂದು.