ಹೈದರಾಬಾದಿನ ಕೇರ್ ಹಾಸ್ಪಿಟಲ್ಸ್ ನಲ್ಲಿ ಕನ್ಸಲ್ಟೆಂಟ್ ಯುರೋಲಜಿ, ಯುರೋಲಜಿ ಕ್ಯಾನ್ಸರ್ ಹಾಗೂ ಟ್ರಾನ್ಸ್ಪ್ಲಾಂಟ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ|| ಅಶ್ವಿನ್ ಗಿರಿಧರ್ ರವರಿಗೆ ಹೈದರಾಬಾದಿನ
ಆಕ್ಟ್ ನೌ ಫೌಂಡೇಶನ್ ನೀಡುವ
ಡಾ।। ಎ.ಪಿ.ಜೆ. ಅಬ್ದುಲ್ ಕಲಾಂ ಹೆಲ್ತ್ ಅಂಡ್ ಮೆಡಿಕಲ್ ಎಕ್ಸೆಲೆನ್ಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಂಗಳೂರಿನ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದ ಇವರು, ಜಿಎಂಸಿ ಕೊಟ್ಟಾಯಂಲ್ಲಿ ಎಂಎಸ್ ಮತ್ತು ಎಂಸಿಎಚ್ ಡಿಗ್ರಿ , ಇಂಡೋ ಅಮೇರಿಕನ್ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರಲ್ಲಿ ಫೆಲೋಷಿಪ್ ಯುರಾಲಜ್ ಕ್ಯಾನ್ಸರ್ , ಲ್ಯಾಪ್ರೋಸ್ಕೋಪಿ ಮತ್ತು ರೊಬೋಟಿಕ್ ಡಿಗ್ರಿಯನ್ನು ಪಡೆದಿದ್ದಾರೆ.
ಉಪ್ಪಿನಂಗಡಿಯ ಪಾದೆ ಮನೆ
ಗಿರಿಧರ್ ಗೌಡ ಅಂತರ ರವರ ಪುತ್ರರಾಗಿರುವ ಇವರು, ಸುಳ್ಯದ ಪುರುಷೋತ್ತಮ ಗೌಡ ಪಡ್ಡoಬೈಲು ರವರ ಅಳಿಯ. ಡಾ. ಅಶ್ವಿನ್ ರವರ ಪತ್ನಿ ಡಾ||ಗ್ರೇಷ್ಮ ಅಶ್ವಿನ್ ರೇಡಿಯೇಷನ್ ಅಂಕೋಲಾಜಿಸ್ಟ್ ಆಗಿದ್ದಾರೆ.