*ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಸಂಸ್ಥೆ (ರಿ.) ಬೆಂಗಳೂರು ಇವರು 2ನೇ ವರ್ಷದ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಆನ್ಲೈನ್ ನಲ್ಲಿ ಮಾ. 23 ರಂದು ಏರ್ಪಡಿಸಿದ್ದು , ಇದರಲ್ಲಿ ಹತ್ತು ವರ್ಷದ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಜಿಶಾ ಕೊರಂಬಡ್ಕ ದ್ವಿತೀಯ ಸ್ಥಾನ,ಶೈನಿ ಕೊರಂಬಡ್ಕ ಚತುರ್ಥ ಸ್ಥಾನ. ಹತ್ತು ವರ್ಷದ ಒಳಗಿನ ವಯೋಮಿತೀಯ ಬಾಲಕರ ವಿಭಾಗದಲ್ಲಿ ಮಣಿ ಪ್ರಕಾಶ್ ಕಡೋಡಿ ದ್ವಿತೀಯ ಸ್ಥಾನ. ಹತ್ತರಿಂದ ಹದಿನೈದು ವರ್ಷದ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಹವೀಕ್ಷಾ ಹರಿಹರ ದ್ವಿತೀಯ ಸ್ಥಾನ, ನಿಹಾನಿ ವಾಲ್ತಾಜೆ ಚತುರ್ಥ ಸ್ಥಾನ ಪಡೆದಿರುತ್ತಾರೆ. ಹವ್ಯಾಸ್ ಕೊರತ್ಯಡ್ಕ, ಮನ್ವಿಶ್ ಕೋಡೊಂಬು, ರಮಿಕ್ಷಾ ಮೀನಾಜೆ, ಗೌರಿತಾ. ಕೆ. ಜಿ.ಭಾಗವಹಿಸಿದ್ದು ಪ್ರೋಸ್ಸಾಹಕ ಬಹುಮಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳು ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆದಿದ್ದಾರೆ.