ಎ.6 ರಂದು ಸುಳ್ಯದ ಮೊಬೈಲ್ ಸಂಸ್ಥೆಗೆ ಹೋದ ಯುವತಿಯ ಫೋಟೊ ತೆಗೆದ ಯುವಕನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮಂಡೆಕೋಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು ಒತ್ತಾಯಿಸಿದ್ದಾರೆ.
ಇದೊಂದು ಅಮಾನವೀಯ ಘಟನೆ.ಮತ್ತೆ ಮರುಕಳಿಸಬಾರದು. ಆದ್ದರಿಂದ ಆರಂಭದ ಪ್ರಕರಣದಲ್ಲೇ ಆರೋಪಿಗೆ ಶಿಕ್ಷೆಯಾದರೆ ಮುಂದೆ ಇಂತ ಘಟನೆ ಮಾಡುವವರಿಗೆ ಪಾಠವಾದೀತು. ಪೋಲೀಸ್ ಇಲಾಖೆ ಒತ್ತಡಕ್ಕೆ ಮಣಿಯದೇ ಆರೋಪಿಗೆ ಶಿಕ್ಷೆ ಕೊಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.