ಅಡ್ಕಾರು ಸಮೀಪ ಮಾಣಿ ಮೈಸೂರು ಹೆದ್ದಾರಿಯ ಬಳಿ ಮೇ 10 ರಂದು ರಾತ್ರಿ ಹಸುವೊಂದು ಸಾವಾಗಿ ವಾರಿಸುದಾರರು ಯಾರಾದರೂ ಇದ್ದಲ್ಲಿ ಸ್ಥಳಕ್ಕೆ ಭೇಟಿ ನೀಡುವಂತೆ ಸುಳ್ಯ ಪೊಲೀಸ್ ಇಲಾಖೆ ವತಿಯಿಂದ ಮಾಹಿತಿ ನೀಡಲಾಗಿತ್ತು.
ಆದರೆ ಇಂದು ಬೆಳಗ್ಗಿನವರೆಗೆ ಸಂಬಂಧಪಟ್ಟವರು ಯಾರು ಬಾರದ ಹಿನ್ನೆಲೆಯಲ್ಲಿ ಈ ಭಾಗದ ಪೊಲೀಸ್ ಬೀಟ್ ನ ಸಿಬ್ಬಂದಿ ಹೈದರ್ ರವರು ಜಾಲ್ಸೂರು ಗ್ರಾಮ ಪಂಚಾಯತ್ ಸಹಕಾರದಿಂದ ಸಾವಿಗೀಡಾದ ಹಸುವನ್ನು ಸ್ಥಳೀಯರ ತೋಟದಲ್ಲಿ ಅನುಮತಿ ಪಡೆದು ದಫನ ಕಾರ್ಯ ಮಾಡಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸರಸ್ವತಿ ರವರು ಸಿಬ್ಬಂದಿಗಳು, ಗ್ರಾಮ ಪಂಚಾಯತಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.