ನೋಡುನೋಡುತ್ತಿದ್ದಂತೆ ಕುಸಿದು ಬಿದ್ದ ತಡೆಗೋಡೆ
ಅದೃಷ್ಟ ವಶಾತ್ ಪಾರಾದ ಮನೆಯವರು
ಕಲ್ಲು ಮಣ್ಣಿನಡಿಗೆ ಸಿಲುಕಿ ಮೃತಪಟ್ಟ ಕೋಳಿಗಳು
ಸರಕಾರಿ ಎಲಿಮಲೆ ಪ್ರೌಢಶಾಲೆಯ ಮೈದಾನಕ್ಕೆ ಒಂದು ಬದಿ ಕಟ್ಟಿದ್ದ ತಡೆಗೋಡೆ ಕುಸಿತಗೊಂಡು ವಿದ್ಯುತ್ ಕಂಬ ಧರೆಶಾಯಿಯಾದ ಹಾಗೂ ಕೋಳಿಗಳು ಮಣ್ಣಿನಡಿಗೆ ಸಿಲುಕಿ ಮೃತಪಟ್ಟ ಹಾಗೂ ಮನೆಯವರು ಅದೃಷ್ಟವಶಾತ್ ಪಾರಾದ ಘಟನೆ ಇಂದು ವರದಿಯಾಗಿದೆ.
ಮೈದಾನದ ಸುತ್ತಲೂ ತಡೆಗೋಡೆ ಮಾಡಲಾಗಿದ್ದು, ಒಂದು ಬದಿ ಜಗದೀಶ ಅಂಬೆಕಲ್ಲು ಎಂಬವರ ಮನೆ ಇರುವ ಭಾಗದಲ್ಲಿ ತಡೆಗೋಡೆ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಇದೇ ತಡೆಗೋಡೆಯನ್ನು ಏರಿಸಿ ಮಣ್ಣು ತುಂಬಿಸಲಾಗಿತ್ತು. ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ತಡೆಗೋಡೆ ಮತ್ತು ವಿದ್ಯುತ್ ಕಂಬ ಧರೆಗುಳಿಯಿತು. ಪರಿಣಾಮ ಜಗದೀಶ ಅಂಬೆಕಲ್ಲು ಎಂಬವರ ಮನೆಗೆ ಹಾನಿಯಾಗಿದೆ. ಹಾಗೂ ಅವರು ತಡೆಗೋಡೆ ಮತ್ತು ಮನೆಯ ಗೋಡೆಯ ಮಧ್ಯೆ ಊರಕೋಳಿಗಳನ್ನು ಸಾಕುತ್ತಿದ್ದರು. ಸುಮಾರು 20 ಕೋಳಿಗಳು ಮಣ್ಣಿನಡಿಗೆ ಸಿಲುಕಿ ಸಾವಿಗೀಡಾಗಿದೆ. ಜಗದೀಶ ಅಂಬೆಕಲ್ಲುರವರಿಗೆ ಸುಮಾರು 20 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿರುವುದಾಗಿ ಅವರು ತಿಳಿಸಿದ್ದಾರೆ.
ಸರಕಾರಿ ಎಲಿಮಲೆ ಪ್ರೌಢಶಾಲೆಯ ಮೈದಾನಕ್ಕೆ ಒಂದು ಬದಿ ಕಟ್ಟಿದ್ದ ತಡೆಗೋಡೆ ಕುಸಿತಗೊಂಡು ವಿದ್ಯುತ್ ಕಂಬ ಧರೆಶಾಯಿಯಾದ ಹಾಗೂ ಕೋಳಿಗಳು ಮಣ್ಣಿನಡಿಗೆ ಸಿಲುಕಿ ಮೃತಪಟ್ಟ ಹಾಗೂ ಮನೆಯವರು ಅದೃಷ್ಟವಶಾತ್ ಪಾರಾದ ಘಟನೆ ಇಂದು ವರದಿಯಾಗಿದೆ.
ನೋಡು ನೋಡುತ್ತಿದ್ದಂತೆ ಧರೆಗುರುಳಿದ ವಿದ್ಯುತ್ ಕಂಬ, ತಡೆಗೋಡೆ
ಎಲಿಮಲೆ ಸರಕಾರಿ ಶಾಲೆಯ ಎದುರಿನಲ್ಲಿರುವ ಅಂಗಡಿ ಮಾಲಕ ಗಿರೀಶ್ ಬಾಳೆತೋಟರವರು ದೂರವಾಣಿಯಲ್ಲಿ ಮಾತನಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಮತ್ತು ತಡೆಗೋಡೆ ನಿಧಾನವಾಗಿ ವಾಳಲು ಆರಂಭಿಸಿತ್ತು. ಗಿರೀಶ್ ರವರು ಜಗದೀಶರವರ ಪತ್ನಿಯನ್ನು ಕರೆದು ವಿಷಯ ತಿಳಿಸುವಷ್ಟರಲ್ಲಿ ನೋಡುನೋಡುತ್ತಿದ್ದಂತೆ ವಿದ್ಯುತ್ ಕಂಬ ಧರೆಗುರುಳಿತು. ಕ್ಷಣಾರ್ಧದಲ್ಲಿ ತಡೆಗೋಡೆಯೂ ಕುಸಿದು ಬಿತ್ತೆನ್ನಲಾಗಿದೆ.