ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಿ ಸಿ ಎಫ್ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಕರ ಸಂಘದ ನಿಯೋಗದಿಂದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರ ಭೇಟಿ

0

ಕೆ.ಪಿ.ಎಸ್. ಮಾದರಿಯಲ್ಲಿ ಶಿಕ್ಷಕರಿಗೆ ಸಂಬಳ ಮತ್ತು ಸೌಕರ್ಯವನ್ನು ಪೂರ್ವ ಪ್ರಾಥಮಿಕ ತರಗತಿಗಳಿಗೆ ಒದಗಿಸಲು ಮನವಿ

ಕರ್ನಾಟಕ ರಾಜ್ಯ ಎಸ್ಟಿಎಂಸಿ ಸಮನ್ವಯ ಕೇಂದ್ರ ವೇದಿಕೆ ಹಾಗೂ ಸರಕಾರಿ ಶಾಲೆಯಲ್ಲಿರುವ ಪೂರ್ವ ಪ್ರಾಥಮಿಕ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಇವರ ನಿಯೋಗವು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಭಾಗೀರಥಿ ಮುರುಳ್ಯ ರವರನ್ನು ಭೇಟಿ ಮಾಡಿ ಸರಕಾರ ಆರಂಭಿಸಿರುವ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರಿಗೆ ಕೆ.ಪಿ.ಎಸ್.ಮಾದರಿಯಲ್ಲಿ ಸಂಬಳ ಹಾಗು ಮಕ್ಕಳಿಗೆ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿತು.
ಮೇ.22 ರಂದು ಭಾಗೀರಥಿ ಮುರುಳ್ಯರವರ ಮನೆಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ಸರಕಾರಿ ಶಾಲೆಗಳಲ್ಲಿ ಎಸ್ಟಿಎಂಸಿ ಯವರು ಶಾಲಾ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭ ಮಾಡಿದ್ದು, ಪೂರ್ವ ಪ್ರಾಥಮಿಕ ತರಗತಿಗಳಿರುವ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿವೆ. ಹಾಗೂ ಮುಚ್ಚುವ ಹಂತಕ್ಕೆ ಬಂದಿದ್ದ ಶಾಲೆಗಳು ಕೂಡ ದಾಖಲಾತಿ ಹೆಚ್ಚಳ ಮಾಡಿಕೊಂಡಿವೆ.
ಆದರೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿ ಆಗುವಂತಹ ಈ ಪೂರ್ವ ಪ್ರಾಥಮಿಕ ತರಗತಿಗೆ ಇಲಾಖೆಯಿಂದ ಶಿಕ್ಷಕರ ವ್ಯವಸ್ಥೆ, ಪಠ್ಯ ಪುಸ್ತಕ, ಆಯಾ ,ಸಮವಸ್ತ್ರ ಮತ್ತು ಪೌಷ್ಟಿಕ ಆಹಾರದ ವ್ಯವಸ್ಥೆಗಳು ದೊರಕುತ್ತಿಲ್ಲ .ಹೆಚ್ಚಿನ ಶಾಲೆಗಳು ದಾನಿಗಳ ಹಾಗೂ ಪೋಷಕರ ಸಹಕಾರ ಹಾಗೂ ಎಸ್ಟಿಎಂಸಿ ಯವರ ಪ್ರಯತ್ನದಿಂದ ನಡೆಯುತ್ತಿದೆ.
ಕೆಲವು ಶಾಲೆಗಳು ಈಗ ನಡೆಸಿಕೊಂಡು ಹೋಗಲು ಸಾಧ್ಯವಾಗದೆ ಮುಚ್ಚುವ ಹಂತಕ್ಕೆ ತಲುಪಿದ್ದು, ಬಡಮಕ್ಕಳಿಗೆ ತಮ್ಮ ಜನವಸತಿ ಪ್ರದೇಶದಲ್ಲಿಯೇ ಆಂಗ್ಲ ಭಾಷೆ ಯೊಂದಿಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ದಿಂದ ವಂಚಿತ ರಾಗುತ್ತಿದ್ದಾರೆ
ಆದರಿಂದ ಸರ್ಕಾರವು ಇದರ ಬಗ್ಗೆ ಕೂಡಲೇ ಗಮನಹರಿಸಿ ಕೆ ಪಿ ಎಸ್ ಶಾಲೆಗಳ ರೀತಿಯಲ್ಲಿ ಅಥವಾ ಅತಿಥಿ ಶಿಕ್ಷಕರ ಮಾದರಿಯಲ್ಲಿ, ಈಗಾಗಲೇ ಎಸ್ಥಿಎಂಸಿಯವರು ಮಾಡಿರುವ ಪೂರ್ವ ಪ್ರಾಥಮಿಕ ತರಗತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ,ಅವರ ಅನುಭವದ ಆಧಾರದಲ್ಲಿ ಸಂಬಳವನ್ನು ಇಲಾಖೆಯೇ ಭರಿಸುವುದು, ಅದರೊಂದಿಗೆ ಮಕ್ಕಳನ್ನು ನೋಡಿಕೊಳ್ಳಲು ಆಯಾ ವ್ಯವಸ್ಥೆ, ಪಠ್ಯ ಪುಸ್ತಕ ವ್ಯವಸ್ಥೆ, ಪೌಷ್ಟಿಕ ಆಹಾರದ ವ್ಯವಸ್ಥೆ, ಕಲಿಕೋಪಕರಣಗಳು ಹಾಗೂ ಪೀಠೋಪಕರಣಗಳ ವ್ಯವಸ್ಥೆಯನ್ನು ಸರಕಾರವೇ ಮಾಡುವ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಶಾಸಕಿ ಭಾಗೀರಥಿ ಮುರುಳ್ಯ ರವರಿಗೆ ಮನವಿ ಕೊಡಲಾಯಿತು.

ನಿಯೋಗದಲ್ಲಿ ಸರಕಾರಿ ಶಾಲೆಯಲ್ಲಿರುವ ಪೂರ್ವ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಸ್ನೇಹಲತಾ ಬಿ ಕೆ, ಸದಸ್ಯರಾದ ಚೈತ್ರ. ಕೆ. ಪಂಜ ಶ್ರೀದೇವಿ ಯು. ವಿ. ಗುತ್ತಿಗಾರು ಜಯಶ್ರೀ ಎಚ್. ಗುತ್ತಿಗಾರು,ಲಲಿತಾ ಆರ್ .ದೇವಚಳ್ಳ ,ಕರ್ನಾಟಕ ರಾಜ್ಯ ಎಸ್ಟಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕರಾದ ಮೊಯಿದಿನ್ ಕುಟ್ಟಿ, ನಿರ್ದೇಶಕರು,ಕೋಶಾಧಿಕಾರಿ ಹಾಗೂ ಮಾಧ್ಯಮ ಕಾರ್ಯದರ್ಶಿ ಯಾದ ಉಸ್ಮಾನ್ ನೆಕ್ಕಿಲು, ನಿರ್ದೇಶಕರಾದ ಸಲೀಮ್ ಮಾಯಂಗಳ,ಜಿ ಎಂ ಮಹಮ್ಮದ್ ಬನ್ನೆಂಗಳ, ನವಾಜ್‌ ಪಳ್ಳತ್ತಾರು ಹಾಗೂ ದೇವಚಳ್ಳ ಶಾಲೆಯ ಎಸ್ಟಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಸವಿತಾ ರವರು ಇದ್ದರು