ಬಜಪ್ಪಿಲ ಕ್ಷೇತ್ರ ಜೀರ್ಣೋದ್ಧಾರ : ಅನುಜ್ಞಾ ಕಲಶ

0

ಇತಿಹಾಸ ಪ್ರಸಿದ್ಧ ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ಮೇ.29ರಂದು ಅನುಜ್ಞಾ ಕಲಶ ಪೂಜೆ ನಡೆಯಿತು.

ಕುಂಟಾರು ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಆಡಳಿತ ಸಮಿತಿ ಅಧ್ಯಕ್ಷರಾಗಿರುವ ಹೇಮಂತ್ ಕುಮಾರ್ ಗೌಡರಮನೆ ಹಾಗೂ ಪೇರಾಲು ಹದಿನಾರು ಮನೆಯವರು ಹಾಗೂ ಊರ ಹತ್ತು ಸಮಸ್ತರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೂ.9ರಂದು ಭೂಮಿಪೂಜೆ ಹಾಗು ಕುತ್ತಿ ಹಾಕುವ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆಯಲಿದೆ.

2024 ಡಿಸೆಂಬರ್ ತಿಂಗಳೊಳಗೆ ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹ್ಮಕಲಶೋತ್ಸವ ನಡೆಯಲಿದೆ. ಸುಮಾರು 1 ಕೋಟಿ ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಹೇಮಂತ್ ಕುಮಾರ್ ಗೌಡರಮನೆ ತಿಳಿಸಿದ್ದಾರೆ.