ಗುತ್ತಿಗಾರಿನ ಚತ್ರಪ್ಪಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರು

0

ಕಸ ಬೀಸಾಡಿದವರಿಂದ ಹೆಕ್ಕಿಸಿ, ದಂಡ ವಿಧಿಸಿದ ಪಂಚಾಯತ್

ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಬೀಸಾಡಿದವರನ್ನು ಪತ್ತೆ ಹಚ್ಚಿ ಅವರದಿಂದಲೇ ಹೆಕ್ಕಿಸಿ ದಂಡ ವಿಧಿಸಿದ ಘಟನೆ ಮೇ.29 ವರದಿಯಾಗಿದೆ.

ಕಳೆದೊಂದು ದಿನದ ಹಿಂದೆ ಚತ್ರಪ್ಪಾಡಿ ಎಂಬಲ್ಲಿ ರಸ್ತೆ ಬದಿ ಕಸದ ರಾಶಿ ಯೊಂದಿತ್ತು. ಇದನ್ನು ಮನಗಂಡ ಪಂಚಾಯತ್ ನವರು ಕಸ ಬೀಸಾಡಿದವರು ಯಾರಿರರಬಹುದು ಎಂದು ಸಾಕ್ಷಿ ಹುಡುಕಿ ಅವರನ್ನು ಪತ್ತೆಹಚ್ಚಿ ವಿಚಾರಿಸಿದಾಗ ಅವರು ಕಸ ಬೀಸಾಡಿರುವ ವಿಚಾರ ಒಪ್ಪಿಕೊಂಡರೆನ್ನಲಾಗಿದೆ. ಬಳಿಕ ಅವರನ್ನೆ ಕರೆದು ಕಸ ಹೆಕ್ಕಿಸಲಾಗಿದೆ. ಅಲ್ಲದೆ 1000 ದಂಡವನ್ನೂ ವಿಧಿಸಲಾಗಿರುವುದಾಗಿ ತಿಳಿದು ಬಂದಿದೆ.