ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಉಪಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕುಮಾರ್ ಸಿ.ಎಚ್ ಮೇ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
28- 01- 1983 ರಂದು ದಿನಗೂಲಿ ನೌಕರನಾಗಿ ಸೇವೆ ಆರಂಭಿಸಿದ ಕುಮಾರ್ ಸಿ.ಎಚ್ ಅವರು 1985 ರ ಜ.1 ರಂದು ಸೇವಾ ಖಾಯಂಮಾತಿ ಗೊಂಡರು.
ಬಳಿಕ ಹಂತ ಹಂತವಾಗಿ ಮುಂಭಡ್ತಿಗೊಂಡು 2018 ರ ಆ.1 ರಿಂದ ಲೆಕ್ಕಿಗರಾಗಿ, 2022 ರ ಜೂ.1 ರಿಂದ ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1978 ರಲ್ಲಿ ಗುತ್ತಿಗಾರಿನ ಪೈಕ ಎಂಬಲ್ಲಿ ಬಂದು ನೆಲೆಸಿದ ಕುಟುಂಬ ಇವರದ್ದು. ಕುಮಾರ್ ಸಿ.ಎಚ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾಸರಗೋಡಿನ ಕಾನತ್ತೂರಿನಲ್ಲಿ ಪಡೆದು, ಮುಂದೆ ತಮ್ಮ ಪ್ರೌಢಶಿಕ್ಷಣವನ್ನುಮುಳ್ಳೇರಿಯದಲ್ಲಿ ಪಡೆದರು. ಪದವಿ ಪೂರ್ವ ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಪಡೆದರು , ಮುಂದೆ ಸಹಕಾರಿ ತರಬೇತಿ ( ಜಿ.ಡಿ.ಸಿ) ಯನ್ನುಮಡಿಕೇರಿಯಲ್ಲಿ ಪಡೆದರು.
ಇವರು ಗುತ್ತಿಗಾರು ಗ್ರಾಮದ ಪೈಕ ನಿವಾಸಿ ದಿl ಈಶ್ವರ್ ಭಟ್ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗಳ ಪುತ್ರ. ಪತ್ನಿ ಶ್ರೀಮತಿ ಗೀತಾ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಶಿಕ್ಷಕಿ. ಮಗಳು ಶ್ರೀಮತಿ ಸ್ಮಿತಾ ಹಾಗೂ ಅಳಿಯ ಸುಪ್ರಜಿತ್ ಉದ್ಯೋಗ ( software engineer)ನಿಮಿತ್ತ ಜರ್ಮನಿಯಲ್ಲಿ ನೆಲೆಸಿದ್ದಾರೆ. ಇನ್ನೋರ್ವ ಪುತ್ರಿ ಸ್ಮೃತಿ ಇವರು ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ .