ಸುಳ್ಯದ ಕೊಡಿಯಾಲ್ ಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24 ನೇ ಸಾಲಿನ
“ತರಂಗ 2024 k ” ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತೆಂಕಿನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆಯ್ಕೆ ಶ್ರೇಣಿ ಗ್ರಂಥ ಪಾಲಕರಾದ ಕೃಷ್ಣ ಸಾಸ್ತಾನ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆಕಾಲೇಜಿನ ರಾಜ್ಯ ಶಾಸ್ತ್ರ ಸಹಾಯ ಪ್ರಾಧ್ಯಾಪಕರಾದ ಪ್ರಶಾಂತ್ ನೀಲಾವರ , ಗೌರವ ಉಪಸ್ಥಿತರಾಗಿ ಸುಳ್ಯಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಲತಾ ಎಂ. ರೈ ವಹಿಸಿದರು. ಬಳಿಕ ಅತಿಥಿಗಳಿಗೆ ಕಾಲೇಜು ವತಿಯಿಂದ ಸ್ಮರಣಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಂಚಾಲಕರಾದ ಪುಷ್ಪರಾಜ್ ಕೆ, ಐಕ್ಯೂಎಸಿ ಸಂಚಾಲಕಿ ಡಾ . ಜಯಶ್ರೀ ಹೆಚ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯ ಶಂಕರ್ ಹೆ .ಚ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಗಳಾದ ಧನುಷ್ ಎಸ್, ಶ್ರೀಪ್ರಸಾದ್ ಎನ್, ಪ್ರತೀಕ್ಷಾ ಆರ್ ಕೆ, ಭೂಮಿಕಾ ಎನ್.ವಿ, ತೇಜಸ್ವಿನಿ ಪಿ. ಆರ್ , ಹಾಗೂ ಕಾಲೇಜಿನ ಅಭಿವೃದ್ದಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘ, ಭೋಧಕ – ಭೋಧ ಕೇತ ವೃಂದದವರು ,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಕ್ಯೂಎಸಿ ಸಂಚಾಲಕಿ ಡಾ . ಜಯಶ್ರೀ ಹೆಚ್ ಸ್ವಾಗತಿಸಿ, ಇತಿಹಾಸ ಪ್ರಾಧ್ಯಾಪಕರಾದ ಶಿವಾನಂದ ಜಿನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯ ಶಂಕರ್ ಹೆ .ಚ್ ವಂದಿಸಿದರು .ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.