ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮ

0

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಮೇ.29 ರಂದು ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮ ನಡೆಯಿತು. ನೂತನವಾಗಿ ಸೇರ್ಪಡೆಗೊಂಡ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು.

ಶಾಲೆಯ ಸಂಚಾಲಕಿ ಗೀತಾಂಜಲಿ ಟಿ.ಜಿ. ಪುಟಾಣಿ ಮಕ್ಕಳನ್ನು ಬರಮಾಡಿಕೊಂಡರು. ಶಿಕ್ಷಕಿರಾದ ಪ್ರಮೀಳ, ರಂಜಿತ, ದೀಕ್ಷಾ ಹಾಗೂ ಸಹಾಯಕಿ ಸುಕನ್ಯ ರವರು ಸಹಕರಿಸಿದರು. ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಇಲ್ಲಿ ಈ ವರ್ಷದ ಪ್ಲೇ ಗ್ರೂಪ್, ಫ್ರಿ ಕೆ.ಜಿ. ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಇನ್ನು ದಾಖಲಾತಿಗೆ ಅವಕಾಶವಿದ್ದು, ನುರಿತ ಶಿಕ್ಷಕರು, ಪ್ರಶಾಂತ ವಾತವಾರಣದೊಂದಿಗೆ ಮಧ್ಯಾಹ್ನದ ಬಿಸಿಯೂಟವು ಲಭ್ಯವಿದೆ ಎಂದು ಸಂಚಾಲಕಿ ತಿಳಿಸಿದ್ದಾರೆ.