ಜೂನ್ – 01: ಬೊಳ್ಪುಗೆ ಎದ್ರಿಕೆ ಮುಂದೆ ಪಿರಿ ಪಿರಿ ಮಳೆ, ಶಾಲೆ ಜೀವನ ನೆಂಪಾತ್

0
  • ಜೂನ್ – 01
  • ಬೊಳ್ಪುಗೆ ಎದ್ರಿಕೆ ಮೊದ್ಲೆ ಪಿರಿ ಪಿರಿ ಮಳೆ ಬಾತಿತ್.ಹಲ್ಸಿನ ಹಣ್ಣ್ ಹಿಟ್ಟ್ ಕಾಯಿ ಚಟ್ನಿನೊಟ್ಟಿಗೆ ಬಿಸಿ ಬಿಸಿ ಕಾಪಿ ಕುಡ್ಕಂಡ್ ಇದ್ದೆ. ಆಗ ನಂಗೆ ನೆಂಪಾತ್ ನಾಳೆ ಜೂನ್ 01 ಅಂತ. ಹಂಗೆ ಸಣ್ಣದಿರಕನ ಶಾಲೆ ಜೀವನ ನೆಂಪಾತ್. 7ನೇ ಕ್ಲಾಸ್ ಪಾಸಾಗಿ ಹೈಸ್ಕೂಲ್ ನ 8ನೇ ಕ್ಲಾಸ್ ಗೆ ಸೇರಿಕೆ ಹೋದು. ಹೊಸ ಕೊಡೆ, ಹೊಸ ಬಟ್ಟೆ, ಕೈಲಿ 2 ನೋಟ್ಸ್ ಪುಸ್ತಕ, 01 ಕಂಪಾಸ್ ಪೆಟ್ಟಿಗೆ, ಅದ ರ್ಲಿ ಒಟ್ಟಿಗೆ 1 ಪೆನ್ 1 ಪೆನ್ಸಿಲ್ ರಬ್ಬರ್. ಸ್ಕೇಲ್ ಎಲ್ಲ ಹಿಡ್ಕಂಡ್ 1 ಇಲೆಸ್ಟಿಕ್ ಲಿ ಅದರ ಹಾಕಂಡ್ ಕೈಲಿ ಹಿಡ್ಕಂಡ್ ಅಣ್ಣ ಅಕ್ಕನವರೊಟ್ಟಿಗೆ ಶಾಲೆಗೆ ಸೇರಿಕೆ ಹೋಗುವ ಕುಶಿ ಒಂದು ಕಡೆ ಅದರೆಡೆಲಿ ಇದೇ ಪಿರಿ ಪಿರಿ ಮಳೆಗೆ ಕೊಡೆನ ಬುಡ್ಸಿ ಕಂಡ್ ಹೊಸ ಚಪ್ಪಲ್ ಗೆ ಮಣ್ಣ್ ಆಗದಂಗೆ ನಡ್ಕಂಡ್ ಹೋಗುವ ಕುಶಿ ಇನ್ನೊಂದು ಕಡೆ ಆದರೆ ಮತ್ತೊಂದು ಕಡೆಂದ ಹೈಸ್ಕೂಲ್ ಮಾಷ್ಟ್ರ್ ಟೀಚರ್ ಗ ಹೆಂಗೊಳಪ್ಪoತೆಳುವ ಹೆದ್ರಿಕೆ. ಶಾಲೆಗೆ ಸೇರಿಸಿ ಆದಮೇಲೆ ಚಂದ ಓದ ಬೇಕು ಒಳ್ಳೆ ಮಾರ್ಕ್ ತೆಗೀಬೇಕುಂತ ಹೇಳಕನ ಕಾಲ್oದಲೇ ನಡ್ಗಿಕೆ ಸುರು ಆದ ಅನುಭವ.

  • ಕ್ಲಾಸ್ ಒಳಗೆ ಹೋಗಿ ಕುದ್ರಕನ ಸುತ್ತಮುತ್ತ ನೋಡಿರೆ ಗುರ್ತವೇ ಇಲ್ಲದ ಮಕ್ಕ. ಇವರೊಟ್ಟಿಗೆ ಅಲ್ಲಿಯೋ ಇಲ್ಲಿಯೋ ಕಾಣುವ ಒಂದೊಂದು ಪ್ರೈಮರಿ 7ನೇ ಕ್ಲಾಸ್ ಲಿ ಇದ್ದ ಮಕ್ಕ. 2-3 ಗುರ್ತದ ಗೂಡೆಗಳ ನೋಡಿಕನ ಅದೆನೋ ಚಿನ್ನ ನೋಡ್ದಸ್ಟ್ ಕುಶಿ ಆಗ್ತಿತ್. ಮಧ್ಯಾಹ್ನ ಆಕನ ಮಕ್ಕಳೇ ನೀವಿನ್ನು ಮನೆಗೆ ಹೋಗಿ ನಾಳೆ ಕ್ಲಾಸ್ ಗೆ ಬಂದ್ರೆ ಸಾಕು. ಅಂತ ಟೀಚರ್ಸ್ ಹೆಳಕನ ಕರ್ ಗಳ ಬಳ್ಳಿ ತೆಗ್ದ್ ಬುಟ್ಟಸ್ಟ್ ಕುಶಿ ಆಗ್ತಿತ್.

  • ಮನೆಗೆ ಬರಕನ ಅಮ್ಮನ ಬಿಸಿ ಬಿಸಿ ಅಡುಗೆ ಕುಚ್ಚುಲು ಅಕ್ಕಿ ಅನ್ನ ಸೊಂತೆ ಕಾಯಿ ಹಲ್ಸಿನಕ್ಕಿ ಹಾಕಿದ ಗೈಪು ಮಾವಿನ ಮಿಡಿ ಉಪ್ಪಿನಕಾಯಿ ಉಂಡ್ 2 ಗಂಟೆಗೆ ಮಲ್ಗಿರೆ 4 ಗಂಟೆಗೆ ಎದ್ರ್ಕನ ಇದ್ದ ಕುಶಿ ನೆನ್ಸಿರೆ ಸ್ವರ್ಗಕ್ಕೆ ಮೂರೇ ಗೇಣ್ ಅಂತ ಅನ್ನಿಸ್ತಿತ್.ಜೂನ್ 01 ನಾಳೆಂತ ನೆಂಪಾಕನ ಬಾಲ್ಯದ ಆ ಜೀವನ ನೆಂಪು ಎಷ್ಟು ಚಂದ ಅಂತ ನೆನ್ಸಿಕಂಡ್ ಇದರ ಬರ್ದೆ ಅಷ್ಟೆ.
  • ಶ್ರೀಮತಿ ಜಯಶ್ರೀರಾಮಚಂದ್ರ
  • ಪಲ್ಲತಡ್ಕ
  • ಐವರ್ನಾಡು
  • ಸುಳ್ಯ. ದ.ಕ.