ದೊಡ್ಡತೋಟ – ಮರ್ಕಂಜ ರಸ್ತೆಯ ಹೈದಂಗೂರು ಎಂಬಲ್ಲಿ ಹರಿಯುವ ತೋಡಿಗೆ ಟ್ಯೂಬ್ ಲೈಟ್ ಪುಡಿಮಾಡಿ ಎಸದಿರುವ ಘಟನೆ ನಡೆದಿದೆ.
ಮರ್ಕಂಜ ಗ್ರಾಮದ ಹೈದಂಗೂರು ಎಂಬಲ್ಲಿ ಕಾಲೋನಿಯೊಂದಿದೆ. ಇಲ್ಲಿಯ ಕೆಲ ಮನೆಗಳಲ್ಲಿ ಉಪಯೋಗಕ್ಕಾಗಿ ಇದೇ ನೀರನ್ನು ಉಪಯೋಗಿಸುತ್ತಾರೆ. ಅಲ್ಲದೇ ಈ ತೋಡನ್ನು ದಾಟಿ ಶಾಲಾ ಮಕ್ಕಳು ಹೋಗುತ್ತಾರೆ. ಹೀಗಾಗಿ ತೋಡುಗೆ ಟ್ಯೂಬ್ ಲೈಟ್ ಎಸೆದಿರುವ ಕಾರಣ ಮತ್ತು ಕೆಲವನ್ನು ಪುಡಿ ಮಾಡಿರುವ ಕಾರಣ ಟ್ಯೂಬ್ ನ ಚೂರು ಗಳಿಂದಾಗಿ ಇದೀಗ ಈ ಭಾಗದವರಿಗೆ ಆತಂಕ ಎದುರಾಗಿದೆ.
ಸುಮಾರು 15 ರಿಂದ 20 ಟ್ಯೂಬ್ ಲೈಟ್ ಗಳನ್ನು ಎಸೆದಿದ್ದು, ಇಂತಹ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈ ಭಾಗದವರು ಆಗ್ರಹಿಸಿದ್ದಾರೆ. ಅಲ್ಲದೇ ಕೆಲವರು ಕಸವನ್ನು ಕೂಡ ಇಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ಸ್ವಚ್ಚಂದ ಕಾಡುಪ್ರದೇಶ ಒಂದು ಕಡೆಯಿಂದ ಮಲೀನವಾಗುತ್ತಿದೆ.
ಹೀಗಾಗಿ ಇಲ್ಲಿ ಪಂಚಾಯತ್ ವತಿಯಿಂದ ಅಥವಾ ಸಂಬಂಧಪಟ್ಟ ಇಲಾಖೆಯ ವತಿಯಿಂದ ಸಿ.ಸಿ.ಕ್ಯಾಮಾರ ಅಳವಡಿಸಿ, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಈ ಭಾಗದವರು ಒತ್ತಾಯಿಸಿದ್ದಾರೆ.