ಮುಖ್ಯಮಂತ್ರಿಯಾಗಿ ಗಗನ್, ಉಪಮುಖ್ಯಮಂತ್ರಿ ತನ್ವಿ ಆಯ್ಕೆ
ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ
2024 – 25 ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ರಚನೆಗಾಗಿ ಜೂ.9 ರಂದು ಚುನಾವಣೆ ನಡೆಯಿತು.
ವಿದ್ಯಾರ್ಥಿಗಳು ಇವಿಎಂ ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳು ಮತವನ್ನು ಹಾಕಲು ಅರ್ಹತೆಯನ್ನು ಪಡೆದಿದ್ದರು. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಸಿಕೊಡಲು ಈ ವಿಧಾನವನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಐದು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು 10ನೇ ತರಗತಿಯ ಗಗನ್ ಅತಿ ಹೆಚ್ಚು ಮತಗಳಿಸಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ. ಹಾಗೂ ಉಪ ಮುಖ್ಯಮಂತ್ರಿಯಾಗಿ 10ನೇ ತರಗತಿ ತನ್ವಿ ಆಯ್ಕೆಯಾಗಿದ್ದಾರೆ. ಈ ಚುನಾವಣೆ ಪ್ರಕ್ರಿಯೆ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ರವರ ಮಾರ್ಗದರ್ಶನದಲ್ಲಿ ನಡೆಯಿತು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಿಕ್ಷಕ ಶಶಿಕಾಂತ್ ಹಾಗೂ ತಾಂತ್ರಿಕ ಸಹಾಯಕರಾಗಿ ಶಿಕ್ಷಕ ಯೋಗನಾಥ್ ಸಹಕರಿಸಿದ್ದರು.