ವಿದ್ಯಾರ್ಥಿನಿಯರಿಗಾಗಿ ಕರ್ನಾಟಕ ದಲ್ಲಿ ಪ್ರಥಮವಾಗಿ ಸಮಸ್ತ ದ ವಸತಿ ಸೌಕರ್ಯಗಳನ್ನೂಳಗೊಂಡ ಎಸ್ ಎನ್ ಇ ಸಿ ಝೈನಿಯ್ಯ ವಿದ್ಯಾ ಕೇಂದ್ರ ಸುಮಾರು ಮೂರು ಕೊಟಿಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಕ್ಕೆ ಎಸ್ ಕೆ ಎಸ್ ಎಸ್ ಎಫ್ ಅಡ್ಕ ಝೈನಿಯ್ಯ ಸಮಿತಿಯು ಸಿದ್ದತೆ ನಡೆಸಿ ಅಜ್ಜಾವರ ಎಜು ಗಾರ್ಡನ್ ನಲ್ಲಿ ಸ್ಥಳ ಖರೀದಿಸಿ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಶಿಲಾನ್ಯಾಸ ನೆರವೇರಿಸಿರುತ್ತಾರೆ. ಇದರ ಯಶಸ್ಸಿಗಾಗಿ ಜೂನ್ 22 ರಿಂದ 100 ದಿನದ ಹೃತ್ಪೂರ್ವಕ ಫಂಡ್ ಶೇಖರಣಾ ಕ್ಯಾಂಪೈನ್ ನಡೆಯುತ್ತಿದ್ದು ಇದನ್ನು ಯಶಸ್ಸಿಗೊಳಿಸಬೇಕೆಂದು SKSSF ಈಸ್ಟ್ ಜಿಲ್ಲಾ ಸಮಿತಿ ವಿನಂತಿಸಿದೆ.
ಕಾರ್ಯಕ್ರಮದಲ್ಲಿ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ನವವಿ ಮುಸ್ಲಿಯಾರ್ ಮುಂಡೊಳೆ, ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಕೊಲ್ಪೆ, ಕೊಶಾಧಿಕಾರಿ ಜಮಾಲ್ ಕೊಡಪದವು, ಜಿಲ್ಲಾ ನಾಯಕರಾದ ಅಬ್ದುಲ್ ರಶೀದ್ ರಹ್ಮಾನಿ, ಸಿದ್ದೀಕ್ ಅಡ್ಕ, ಪಿ ಎ ಝಕರಿಯಾ ಅಸ್ಲಮಿ, ಜಬ್ಬಾರ್ ಅಸ್ಲಮಿ, ಸ್ವದಕ ದಾರಿಮಿ, ರಶೀದ್ ಯಮಾನಿ, ಸಂಶುದ್ದೀನ್ ಹನೀಫಿ, ಯಾಸಿರ್ ಆರಾಫತ್ ಕೌಸರಿ, ಶಾಫಿ ಪಾಪೆತಡ್ಕ, ಇಬ್ರಾಹಿಂ ಬಾತಿಷ ಹಾಜಿ ಪಾಟ್ರಕೋಡಿ, ಅಶ್ರಫ್ ಮುಕ್ವೆ, ಜಮಾಲ್ ಕೆ ಎಸ್ ಬೆಳ್ಳಾರೆ ಉಪಸ್ಥಿತರಿದ್ದರು.