ಸ್ಥಳಿಯಾಡಳಿತ, ಜನಪ್ರತಿನಿಧಿಗಳ ಸ್ಪಂದನೆ ಬೇಕಾಗಿದೆ
ಸತತ ಗಾಳಿ ಮಳೆಗೆ ಸೋರುತ್ತಿರುವ ಹರಕಲು ಮನೆಯಲ್ಲಿ ವೃದ್ಧೆಯೋರ್ವರು ವಾಸಿಸುತ್ತಿದ್ದು, ಅವರ ಮನೆ ನಿರ್ಮಾಣಕ್ಕೆ,ಸ್ಥಳೀಯಾಡಳಿತ, ಜನಪ್ರತಿನಿಧಿಗಳ,ಸಹೃದಯಿಗಳ ಸಹಾಯ ಹಸ್ತ ಬೇಕಾಗಿದೆ.
ಕನಕಮಜಲು ಗ್ರಾಮದ ಮಳಿ ಎಂಬಲ್ಲಿ ಗುಡ್ಡೆಯ ಇಳಿಜಾರು ಪ್ರದೇಶದಲ್ಲಿ ವಿಧವೆ ಯಮುನಾ ಎಂಬವರು ವಾಸಿಸುತ್ತಿದ್ದು, ಮಾಡು ಮುರಿದು ಬಿದ್ದು ಸಾಧರಣ ಐದಾರು ದಿನಗಳು ಕಳೆದಿದೆ. ಜೀವನಕ್ಕೆ ವಿಧವಾ ವೇತನವೇ ಸಾಕಾಗುವುದಿಲ್ಲ. ಈ ದುಸ್ಥಿತಿಯಲ್ಲಿ ಮಳೆ ಗಾಳಿಗೆ ರಾತ್ರಿ ಕಳೆಯುವುದು ಕಷ್ಟವಾಗಿದೆ. ಇನ್ನೊಬ್ಬರ ಮನೆಯೇ ಆಸರೆಯಾಗಿದೆ.ರಿಪೇರಿಗೆ ತೀವ್ರ ಹಣದ ಅಡಚಣೆ, ಆರೋಗ್ಯ ಸರಿ ಇಲ್ಲದ ಪರಿಸ್ಥಿತಿಯಾಗಿದೆ.
ಸುದ್ದಿ ತಿಳಿದು ಪಂಚಾಯತ್ ಪಿ.ಡಿ.ಒ. ಮತ್ತು ವಿ.ಎ .ಬಂದು ಮನೆಯ ಭಾವಚಿತ್ರ ತೆಗೆದು ಹೋಗಿದ್ದಾರೆ. ದಿನವೂ ಪರಿಹಾರದ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಮನೆ ದುರಸ್ತಿಗೊಳಿಸಿ ಸುವ್ಯವಸ್ಥೆ ಕಲ್ಪಿಸುವ ಭರವಸೆ ಸಿಕ್ಕಿದರೂ ಕಾರ್ಯಗತವಾಗಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಂಚಾಯತ್ ಆಗಲಿ ತಾಲೂಕು ಅಧಿಕಾರಿಗಳಾಗಲಿ ಯಾ ಶಾಸಕರಾಗಲಿ ಈ ಬಗ್ಗೆ ಅಗತ್ಯ ಸ್ಪಂದಿಸಬೇಕಾಗಿದೆ