ಕಲ್ಲುಗುಂಡಿ: ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಸವೇರಪುರ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಆಚರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಫೆರ್ನಾಂಡಿಸ್ ರವರು ಅಧ್ಯಕ್ಷತೆ ವಹಿಸಿದ್ದರು.
ಸಹ ಶಿಕ್ಷಕಿಯರಾದ ಶ್ರೀಮತಿ ಇಂದಿರಾವತಿ ಹಾಗೂ ಶ್ರೀಮತಿ ವಾಣಿ ಬಿ.ಎಲ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಬಳಿಕ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶ್ರುತಿ ಕೆ.ಆರ್. ಅವರ ಮಾರ್ಗದರ್ಶನಂತೆ ವಿವಿಧ ಆಸನಗಳನ್ನು ಮಾಡಿಸಲಾಯಿತು.

ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು. ಚಂದನ ಆರ್. ಸ್ವಾಗತಿಸಿ, ಕು. ಅಲ್ವಿಯಾ ಫಿಯೋನ ಡಿಸೋಜರವರು ವಂದಿಸಿದರು. ವಿದ್ಯಾರ್ಥಿ ಲ್ಯಾನಿಶ್ ರೀಶೊನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.