ಕದಿಕಡ್ಕ ಸ. ಹಿ. ಪ್ರಾ. ಶಾಲೆ ಮಂತ್ರಿ ಮಂಡಲ

0

ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಜಾಲ್ಸೂರಿನ ಸ ಹಿ ಪ್ರಾ ಶಾಲೆ ಕದಿಕಡ್ಕದಲ್ಲಿ ಈ ಸಾಲಿನ ಮಂತ್ರಿಮಂಡಲಕ್ಕೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ಪ್ರಕ್ರಿಯೆಯು ಜೂ.03 ರಂದು ನಡೆಯಿತು.

ಶಾಲಾ ನಾಯಕಿಯಾಗಿ ತನ್ವಿ ಡಿ.ಎಸ್ 7ನೇ, ಉಪನಾಯಕಿಯಾಗಿ ಸಂಜನಾ. ಎಸ್ 6ನೇ, ವಿರೋಧ ಪಕ್ಷದ ನಾಯಕನಾಗಿ ಮೊಹಮ್ಮದ್ 7ನೇ, ಸ್ಪೀಕರ್ ಡಿ. ಮನ್ವಿತಾ 7ನೇ ಆಯ್ಕೆಯಾದರು. ಗೃಹ ಮಂತ್ರಿಯಾಗಿ ಯಶವಂತ 7 ನೇ, ಉಪಗೃಹ ಮಂತ್ರಿಯಾಗಿ ಅಮಿಷ್ 7ನೇ, ಚಿತ್ರೇಶ್ 6ನೇ, ವಿದ್ಯಾಮಂತ್ರಿಯಾಗಿ ಖುಷಿ ಬಿ.ಹೆಚ್ 7ನೇ, ಉಪ ವಿದ್ಯಾಮಂತ್ರಿಯಾಗಿ ವರ್ಷ ಎಂ. ಜಿ 6ನೇ, ಕೃಷಿ ಮಂತ್ರಿಯಾಗಿ ಮೋನಿಶ್ 7ನೇ, ಉಪ ಕೃಷಿ ಮಂತ್ರಿಯಾಗಿ ರಚನ್ ಜೆ.ಕೆ 6ನೇ, ಆಹಾರ ಮಂತ್ರಿಯಾಗಿ ಚಂದನ್ ಪಿ.ಡಿ 7ನೇ, ಉಪ ಆಹಾರ ಮಂತ್ರಿಯಾಗಿ ಸನ ಫಾತಿಮಾ 6ನೇ, ನೀರಾವರಿ ಮಂತ್ರಿಯಾಗಿ ಮಹಮ್ಮದ್ ಶಾಹಿಲ್ 7ನೇ, ಉಪ ನೀರಾವರಿ ಮಂತ್ರಿಯಾಗಿ ನಿರಂಜನ್, ಭವ್ಯಶ್ರೀ 6ನೇ, ಆರೋಗ್ಯ ಮಂತ್ರಿಯಾಗಿ ಮೊಹಮ್ಮದ್ ಶಹಾದ್ 7ನೇ, ಉಪ ಆರೋಗ್ಯ ಮಂತ್ರಿಯಾಗಿ ಆಯಿಷತ್ ಲುಬಾಬಾ 6ನೇ, ಸಾಂಸ್ಕೃತಿಕ ಮಂತ್ರಿಯಾಗಿ ಚರೀಷ್ಮ. ಪಿ 6ನೇ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ, ಸಂಜನಾ 5ನೇ, ಕ್ರೀಡಾ ಮಂತ್ರಿಯಾಗಿ ದಿಗಂತ್ 7ನೇ, ಉಪ ಕ್ರೀಡಾ ಮಂತ್ರಿಯಾಗಿ ಕದೀಜ ಅನಾನ 6ನೇ, ಸ್ವಚ್ಛತಾ ಮಂತ್ರಿಯಾಗಿ ಚೈತ್ರ, ಐಫಾ ಮರಿಯಂ 7ನೇ, ಉಪ ಸ್ವಚ್ಛತಾ ಮಂತ್ರಿಗಳಾಗಿ ತೇಜಸ್, ಅಭಿಷೇಕ್ 6ನೇ ಆಯ್ಕೆಯಾದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಅನುಷಾ ಕೆ. ಎ, ಉಪಸ್ಥಿತರಿದ್ದರು. ಸಹ ಶಿಕ್ಷಕರು ಸಹಕರಿಸಿದರು.