ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ ಸುಳ್ಯದ ವಿದ್ಯಾರ್ಥಿ ಸರ್ಕಾರ ರಚನೆ

0

ಸ.ಪ.ಪೂ.ಕಾ.ಪ್ರೌಢಶಾಲೆ ಸುಳ್ಯದ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರ್ಕಾರವು ಇ.ವಿ.ಎಂ. ಮತಯಂತ್ರದ ಮೂಲಕ ಜೂ.22ರಂದು ನಡೆಯಿತು.

ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಮೂಡಿತ್ತಾಯ ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಪೂರ್ಣಿಮಾ ಟಿ. ಇವರ ನೇತ್ರತ್ವದಲ್ಲಿ ನಡೆದ ಶಾಲಾ ಚುನಾವಣೆಯಲ್ಲಿ ಶಾಲಾ ನಾಯಕ ಸ್ಥಾನಕ್ಕೆ 5 ಅಭ್ಯರ್ಥಿಗಳು ಮತ್ತು ಶಾಲಾ ಉಪನಾಯಕ ಸ್ಥಾನಕ್ಕೆ 2 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.


ಚುನಾವಣಾ ಫಲಿತಾಂಶವನ್ನು ಟಿ.ವಿ.ಪರದೆಯಲ್ಲಿ 3 ಸುತ್ತುಗಳ ಮೂಲಕ ಪ್ರಕಟಿಸಲಾಯಿತು.ಶಾಲಾ ವಿದ್ಯಾರ್ಥಿ ನಾಯಕಿಯಾಗಿ ನಿಶಾ ಪಿ.ಎಸ್.10ನೇ ಬಿ ವಿಭಾಗ ಮತ್ತು ಉಪನಾಯಕನಾಗಿ ಶ್ರೀ ಅಕ್ಷಯ್ 9 ನೇ ಡಿ ವಿಭಾಗ ಆಯ್ಕೆಯಾದರು.

ಚುನಾವಣಾ ಕಾರ್ಯದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಚುನಾವಣೆಯ ಎಲ್ಲಾ ಹಂತಗಳನ್ನು ಅನುಸರಿಸಲಾಯಿತು.ಫಲಿತಾಂಶ ಘೋಷಣೆ ಯಾದ ನಂತರ ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು ಶಾಲಾ ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕರು ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಶಾಲಾ ಮಂತ್ರಿ ಮಂಡಲದ ವಿವರ ಸ್ಪೀಕರ್ ಅನನ್ಯಾ ಎನ್.ಕೆ.,ಉಪ ಸ್ಪೀಕರ್ ಆಶಿಷ್ ಕೆ., ಕಾರ್ಯದರ್ಶಿ ಪ್ರತೀಕ್ಷಾ ಪಿ .ಬಿ.,ಮುಖ್ಯ ಮಂತ್ರಿ ನಿಶಾ ಪಿ. ಎಸ್., ಉಪಮುಖ್ಯಮಂತ್ರಿ ಶ್ರೀ ಅಕ್ಷಯ್,,ಗ್ರಹ ಮಂತ್ರಿ ಸಚಿತ್ ಗೌಡ,ಉಪ ಗ್ರಹ ಮಂತ್ರಿ ಅನುಷಾ, ವಿನಾಯಕ, ಆಹಾರ ಮಂತ್ರಿ ವರ್ಷಾ ಎಂ.ಆರ್.,ಉಪ ಆಹಾರ ಮಂತ್ರಿ ಅಭಿಷೇಕ್, ಸ್ವಚ್ಛತೆ ಮಂತ್ರಿ ಕೌಶಿಕ್, ನೀರಾವರಿ ಮಂತ್ರಿ ಪ್ರದೀಪ್ ಎಂ.ಎಚ್.,ಉಪ ನೀರಾವರಿ ಮಂತ್ರಿ ಅರ್ಪಿತಾ ಕಾಮತ್,ಆರೋಗ್ಯ ಮಂತ್ರಿ ಜನನಿ ಎಂ.,ಉಪ ಆರೋಗ್ಯ ಮಂತ್ರಿ ಲಿಖಿತ್ ಎಂ.ಆರ್,ಶಿಸ್ತು ಮತ್ತು ಶಿಕ್ಷಣ ಮಂತ್ರಿ ಶ್ರೇಯಾ ಸಿ.ಎಚ್.,ಉಪಶಿಸ್ತು ಮತ್ತು ಶಿಕ್ಷಣ ಮಂತ್ರಿ ಚರೇಶ್, ಸಾಂಸ್ಕೃತಿಕ ಮಂತ್ರಿ ಪ್ರಶಾಂತ್ ಸಿ.ಬಿ., ಉಪ ಸಾಂಸ್ಕೃತಿಕ ಮಂತ್ರಿ ತನ್ವಿ ಎನ್.ಕೆ., ವಾರ್ತಾ ಮತ್ತು ಗ್ರಂಥಾಲಯ ಮಂತ್ರಿ ಮಹಮ್ಮದ್ ಅರ್ಷಾದ್,ಉಪ ವಾರ್ತಾ ಮತ್ತು ಗ್ರಂಥಾಲಯ ಮಂತ್ರಿ ರಮ್ಯಾ, ಕ್ರೀಡಾ ಮಂತ್ರಿ ಲಿತೇಶ್, ಉಪ ಕ್ರೀಡಾ ಮಂತ್ರಿ ಪ್ರಣೀತ್,ನಿರೀಕ್ಷಾ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಮನ್ವಿತ್ ಎಂ.,ಉಪ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಹಿಮಾದ್ರಿ ಸಿ.ಎಂ.,ಕ್ರಷಿ ಮತ್ತು ಪರಿಸರ ಮಂತ್ರಿ ಬ್ರಿಜೇಶ್ ಎನ್.ಎಚ್.,ಉಪ ಕ್ರಷಿ ಮತ್ತು ಪರಿಸರ ಮಂತ್ರಿ ಹರ್ಷಿತಾ.ವಿರೋಧ ಪಕ್ಷದ ನಾಯಕ ಪ್ರಣಾಮ್ ಕೆ.ಸಿ.,ವಿರೋದ ಪಕ್ಷದ ಉಪನಾಯಕಿ ಯಾಮಿನಿ, ಆಯ್ಕೆಯಾದರು.