ಮೂಲಭೂತ ಸೌಲಭ್ಯಗಳ ಕುರಿತು ಚರ್ಚೆ
ಕನಕಮಜಲು ಗ್ರಾಮ ಪಂಚಾಯತಿಯ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜು.4ರಂದು ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿ.ಐ.ಇ.ಆರ್.ಟಿ. ದೇವರಾಜ್ ಮುತ್ಲಾಜೆ ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಗುಮಾಸ್ತ ಪ್ರಭಾಕರ ಕಂಚಿಲ್ಪಾಡಿ ಅವರು ಗ್ರಾಮಸಭೆಯ ವರದಿ ಮತ್ತು ಜಮಾ ಖರ್ಚಿನ ವಿವರ ಮಂಡಿಸಿದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು ಸ್ವಾಗತಿಸಿ, ಗತಸಭೆಯ ವರದಿ ಮಂಡಿಸಿದರು.
ಸಭೆಯಲ್ಲಿ ಮೂಲಭೂತ ಸೌಲಭ್ಯಗಳಾದ ಗ್ರಾಮೀಣ ಪ್ರದೇಶದ ರಸ್ತೆ ಸಮಸ್ಯೆ, ಕುಡಿಯುವ ನೀರು, ಸ್ವಚ್ಛತೆ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಇಲಾಖಾ ಅಧಿಕಾರಿಗಳು ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾ.ಪಂ. ಕಾರ್ಯದರ್ಶಿ ರಮೇಶ್ ಟಿ., ಸದಸ್ಯರುಗಳಾದ ಶ್ರೀಧರ ಕುತ್ಯಾಳ, ಇಬ್ರಾಹಿಂ ಕಾಸಿಂ, ಶ್ರೀಮತಿ ದೇವಕಿ ಕುದ್ಕುಳಿ, ಶ್ರೀಮತಿ ಪ್ರೇಮಲತಾ ಪಂಜಿಗುಂಡಿ, ಶ್ರೀಮತಿ ಸುಮಿತ್ರ ಕುತ್ಯಾಳ ಉಪಸ್ಥಿತರಿದ್ದರು.