ಜು.5 ರಂದು ಸುಬ್ರಹ್ಮಣ್ಯ ಗ್ರಾ.ಪಂ. ನಲ್ಲಿ ಅಭಿವೃದ್ಧಿ ಪ್ರಾಧಿಕಾರದ ಸಾಧಕ-ಭಾಧಕಗಳ “ವಿಶೇಷ ಗ್ರಾಮ ಸಭೆ”

0

ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ ಸುಬ್ರಹ್ಮಣ್ಯ, ಏನೆಕಲ್ಲು ಮತ್ತು ಐನೆಕಿದು ಗ್ರಾಮಗಳ ಗ್ರಾಮಸ್ಥರ ಇರುವಿಕೆಯಲ್ಲಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾಪದ ಕುರಿತು ಸಾಧಕ-ಭಾಧಕಗಳ ಕುರಿತು “ವಿಶೇಷ ಗ್ರಾಮ ಸಭೆ” ನಡೆಯಲಿದೆ.

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗುವ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸಾಧಕ-ಭಾಧಕಗಳ ಬಗ್ಗೆ ಚರ್ಚಿಸಲು “”ವಿಶೇಷ ಗ್ರಾಮ ಸಭೆ””ಯನ್ನು ಪೂರ್ವಾಹ್ನ ಗಂಟೆ:11.00ಕ್ಕೆ ಸರಿಯಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯಾಲಯದ ವಠಾರದಲ್ಲಿನ ನಡೆಸಲು ನಿರ್ಧರಿಸಲಾಗಿದೆ. ಆದುದರಿಂದ ಸದ್ರಿ ವಿಶೇಷ ಗ್ರಾಮ ಸಭೆಯಲ್ಲಿ ಎಲ್ಲಾ ಗ್ರಾಮಸ್ಥರು, ಜನಪ್ರತಿನಿಧಿಗಳು, ನಾಗರೀಕರು, ಸಾರ್ವಜನಿಕರು ಭಾಗವಹಿಸುವಂತೆ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.