ಒಡಬಾಯಿ ಬಳಿ ಗೂಡ್ಸ್ ವಾಹನ ಪಲ್ಟಿ

0

ಸ್ಕೂಲ್ ಬುಕ್ ಕಂಪೆನಿಯ ಕಂಟೈನರ್‌ ಗೂಡ್ಸ್ ವಾಹನ ಸುಳ್ಯದ ಒಡಬಾಯಿ ರಸ್ತೆಯ ನಡುವಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು ಘಟನೆಯಿಂದ ಚಾಲಕ ಹಾಗೂ ಇತರ ಇಬ್ಬರು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಇಂದು ಸಂಜೆ ಸಂಭವಿಸಿದೆ.

ಮಂಗಳೂರಿನಿಂದ ಸುಳ್ಯ ಕಡೆ ನೋಟ್ ಪುಸ್ತಕವನ್ನು ತರುತ್ತಿದ್ದ ಜೆ ಕೆ ಪೇಪರ್ ಲಿಮಿಟೆಡ್ ಕಂಪನಿಯ ವಾಹನ ಇದಾಗಿದ್ದು ಓಡಬಾಯಿ ಕಸ್ತೂರಿ ನರ್ಸರಿ ಸಮೀಪ ರಸ್ತೆ ಬದಿಗೆ ಚಾಲನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅಪಘಾತದಲ್ಲಿ ಚಾಲಕನ ಕೈಗೆ ಗಾಯವಾಗಿದ್ದು, ವಾಹನದಲ್ಲಿ ಇದ್ದ ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯ ವಾಗಿದ್ದು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ಗಾಯಾಳುಗಳನ್ನು ಅಚ್ಚು ಪ್ರಗತಿಯವರ ಆಂಬುಲೆನ್ಸಿನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಸ್ಥಳಕ್ಕೆ ಕ್ರೈನ್ ಬಂದು ಸ್ಥಳೀಯರ ಸಹಕಾರದಿಂದ ವಾಹನವನ್ನು ಮೇಲೆತ್ತಲಾಗಿದೆ.