ಐವರ್ನಾಡು ಕಾಲೇಜಿನಲ್ಲಿ ಹದಿಹರೆಯದ ಸವಾಲುಗಳು ಅರಿವು ಕಾರ್ಯಕ್ರಮ

0

ಸರ್ಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹದಿಹರೆಯದ ಸವಾಲುಗಳು ಎಂಬ ವಿಷಯದ ಬಗ್ಗೆ ಅರಿವು ಕಾರ್ಯಕ್ರಮ ಜು.05 ರಂದು ನಡೆಯಿತು.


ಐರ್ವನಾಡು ಗ್ರಾಮ ಪಂಚಾಯತ್,ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಡಾ||ಕೆ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಐರ್ವನಾಡು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಸೂಫಿ ಪೆರಾಜೆ ವಹಿಸಿದ್ದರು. ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಐರ್ವನಾಡು ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ನೆರವೇರಿಸಿ ವಿದ್ಯಾರ್ಥಿಗಳು ಪ್ರೀತಿ -ಪ್ರೇಮಗಳಿಗೆ ಸಿಲುಕದೆ ವಿದ್ಯೆ,ಆಟದ ಕಡೆ ಗಮನವಹಿಸಿ ಭವಿಷ್ಯ ರೂಪಿಸಿಕೂಳ್ಳಬೇಕು ಎಂದು ಹೇಳಿದರು.


ಸಂಪನ್ಮೂಲ ವ್ಯಕ್ತಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ರಶ್ಮಿತಾ ಕರ್ಕೇರಾರವರು ಹದಿಹರೆಯದಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಬದಲಾವಣೆ ಮತ್ತು ಜವಾಬ್ದಾರಿಗಳ ಬಗ್ಗೆ ಪ್ರಸ್ತುತ ಘಟನೆಗಳ ಬಗ್ಗೆ ತಿಳಿಸುತ್ತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಕಮಲಾಕ್ಷರವರು ಭೋದಕ ಮತ್ತು ವಿದ್ಯಾರ್ಥಿಗಳು ಚೈಲ್ಡ್ ರೈಟ್ ಟ್ರಸ್ಟ್ ನ ಕ್ಷೇತ್ರ ಸಂಯೋಜಕಿ ಶ್ರೀಮತಿ ಅಮೃತರವರು ಭಾಗವಹಿಸಿದರು .ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ಶ್ರೀ ಅಬ್ದುಲ್ಲ ರಹಿಮಾನ್ .ಎಸ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಣೆ ನೆರವೇರಿಸಿದರು ಹಾಗೂ ಚರಣ್ .ಪಿ ವಂದಿಸಿದರು.