ಕಾಟಿಪಳ್ಳದಲ್ಲಿ ಯುವಕನ ಕಿಡ್ನಾಪ್ ಗೆ ಯತ್ನ : ದೂರು ದಾಖಲು

0

ಅಜ್ಜಾವರದ ಕಾಟಿಪಳ್ಳದಲ್ಲಿ ರಸ್ತೆಯಲ್ಲಿ ನಡೆದುಕೊಂಡು‌ ಹೋಗುತ್ತಿದ್ದ ಯುವಕನನ್ನು ಕಾರಿನಲ್ಲಿ ಬಂದವರು ಕಿಡ್ನಾಪ್ ಮಾಡಲು ಯತ್ನಿಸಿರುವ ಕುರಿತು ಸುಳ್ಯ ಪೋಲೀಸ್ ಠಾಣೆಗೆ ಆ ಯುವಕನ ತಂದೆ ದೂರು ನೀಡಿರುವುದಾಗಿ ವರದಿಯಾಗಿದೆ.

ಅಜ್ಜಾವರದ ಕಾಟಿಪಳ್ಳದ ಕುಶಲ ಎಂಬವರ ಪುತ್ರ ದೀನ್ ರಾಜ್ (17) ಎಂಬವರು ಜು.6ರಂದು ಮಧ್ಯಾಹ್ನ ಮನೆಯಿಂದ ಮೇನಾಲದ ಕಡೆಗೆ ರಸ್ತೆಯಲ್ಲಿ‌ ನಡೆದುಕೊಂಡು ಹೋಗುತ್ತಿದ್ದರೆಂದೂ ಈ ವೇಳೆ ಸುಳ್ಯ ಕಡೆಯಿಂದ 800 ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಯುವಕನ ಬಳಿ ಕಾರು ನಿಲ್ಲಿಸಿ, ಎಲ್ಲಿಗೆ ಹೋಗುವುದೆಂದು ಕೇಳಿ ಕಾರಿನಲ್ಲಿ ಬರುವಂತೆ ಬಲವಂತವಾಗಿ ಒಳಗೆ ಹತ್ತಿಸಿದರೆನ್ನಲಾಗಿದೆ. ದೀನ್ ರಾಜ್ ಕಾರಿನಲ್ಲಿದ್ದವರಲ್ಲಿ ಒಬ್ಬನಿಗೆ ಎರಡೇಟು ನೀಡಿ, ಡೋರ್ ತೆಗೆದು ಓಡಿ ಮೇನಾಲಕ್ಕೆ ಹೋಗಿ ವಿಷಯ ತಿಳಿಸಿದರೆನ್ನಲಾಗಿದೆ. ಕಾರು ಅಜ್ಜಾವರ ಕಡೆಗೆ ಮುಂದಕ್ಕೆ ಹೋಯಿತೆಂದು ತಿಳಿದುಬಂದಿದೆ.
ಘಟನೆಯ ಕುರಿತು ಧೀನ್ ರಾಜ್ ರ ತಂದೆ ಸುಳ್ಯ ಪೋಲೀಸರಿಗೆ ಜು.7ರಂದು ದೂರು‌ ನೀಡಿರುವುದಾಗಿ ತಿಳಿದುಬಂದಿದೆ.

ಘಟನೆಯ ಕುರಿತು ಧೀನ್ ರಾಜ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ, ನಾನು ಮನೆಯಿಂದ ಮೇನಾಲ ಕಡೆಗೆ ನಡೆದುಕೊಂಡು ಹೋಗುತಿದ್ದೆ. ಕಾರಿನಲ್ಲಿ ಬಂದವರು ನನ್ನನ್ನು ಎಳೆದು ಕಾರಿನೊಳಗೆ ಕುಳಿತುಕೊಳ್ಳುವಂತೆ ಹೇಳಿ ಎಳೆದರು. ನಾನು ಕಾತಿನಲ್ಲಿದ್ದ ಒಬ್ಬನಿಗೆ ಎರಡೇಟು ಬಿಗಿದು ತಪ್ಪಿಸಿಕೊಂಡು ಬಂದೆ. ಈ‌ಕುರಿತು ತಂದೆ ಪೋಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.