ಓಟಿಗಾಗುವಾಗ ಬರುವ ನೀವು ಈಗ ರಸ್ತೆ ಹಾಳಾದಾಗ ಯಾಕೆ ಬಂದು ನೋಡೋದಿಲ್ಲ

0

ಉಬರಡ್ಕ ಗ್ರಾಮ ಸಭೆಯಲ್ಲಿ ಮಂಜಿಕಾನ ರಸ್ತೆ ಫಲಾನುಭವಿಗಳ ಆಕ್ರೋಶ

ಗ್ರಾಮದಲ್ಲಿ ‘ಪಯಸ್ವಿನಿ ಗಾಂಧಿವನ ಗೋಶಾಲೆ’ ಮಾಹಿತಿ ನೀಡಿದ ಅಧಿಕಾರಿ

ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡುರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಭವನದಲ್ಲಿ ನಡೆಯಿತು.

ಸಿಡಿಪಿಒ ಶೈಲಜಾ ನೋಡೆಲ್ ಅಧಿಕಾರಿಯಾಗಿದ್ದರು. ಪಿಡಿಒ ರವಿಚಂದ್ರ ವರದಿ ವಾಚಿಸಿದರು. ಪಂಚಾಯತ್ ಉಪಾಧ್ಯಕ್ಷೆ ಚಿತ್ರಕುಮಾರ್, ಸದಸ್ಯರುಗಳಾದ ಪ್ರಶಾಂತ್ ಪಾಣತ್ತಿಲ, ಸಂದೀಪ್ ಕುತ್ತಮೊಟ್ಟೆ, ಮಮತಾ ಕುದ್ಪಾಜೆ, ಭವಾನಿ ಇದ್ದರು.

ಸಭೆಯಲ್ಲಿ ಮಂಜಿಕಾನ ರಸ್ತೆ ಅವ್ಯವಸ್ಥೆಯ ಕುರಿತು ಆ ಭಾಗದವರು ಮಹಿಳೆಯವರು ಪ್ರಸ್ತಾಪಿಸಿ, ಓಟು ಕೇಳುವಾಗ ಬರುವ ನೀವು ಈಗ ರಸ್ತೆಗಳು ಹಾಳಾದಾಗ ಯಾಕೆ ಬಂದು ನೋಡೋದಿಲ್ಲ. ಮೊನ್ನೆ ನಾವೇ ಊರವರು 15 ಸಾವಿರ ಖರ್ಚು ಮಾಡಿ ಕೆಲಸ ಮಾಡಿದ್ದೇವೆ. ಪಂಚಾಯತ್ ಯಾಕೆ ರಸ್ತೆ ಸರಿ ಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿ.ಎಸ್. ಗಂಗಾಧರ್, ಸುರೇಶ್ ಎಂ.ಎಚ್. ಊರವರ ಪರವಾಗಿ ಧ್ವನಿಗೂಡಿಸಿದರು. ಈ ಕುರಿತು ರಸ್ತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗಿವುದು ಎಂದು ಅಧ್ಯಕ್ಷರು ಹಾಗೂ ಪಿಡಿಒ ಹೇಳಿದರು.

ಗ್ರಾಮದಲ್ಲಿರುವ ಗೋಶಾಲೆಯ‌ ಮಾಹಿತಿಯನ್ನು ಗ್ರಾಮಸ್ಥರಾದ ಪಿ.ಎಸ್.‌ಗಂಗಾಧರ್ ಹಾಗೂ ಸುರೇಶ್ ಎಂ.ಹೆಚ್. ಕೇಳಿದಾಗ, ಪಶುಸಂಗೋಪನೆ ಇಲಾಖಾಧಿಕಾರಿ ಉಬರಡ್ಕ ಗ್ರಾಮದಲ್ಲಿ ನಿರ್ಮಾಣವಾಗಿರುವ ಪಯಸ್ವಿನಿ ಗಾಂಧಿವ‌ನ ಗೋಶಾಲೆಯ ಕುರಿತು ವಿವರ ನೀಡಿ, ಸರಕಾರ ಮತ್ತು ಖಾಸಗಿ ಸಂಸ್ಥೆ ಸಹಭಾಗಿತ್ವ ದಲ್ಲಿ ನಡೆಯುವ ಕುರಿತು ವಿವರ ನೀಡಿದರು.

ವಿದ್ಯುತ್ ಕಂಬಕ್ಕೆ ಬ್ಯಾಬರ್ ಕಟ್ಟಬೇಡಿ

ರಸ್ತೆ‌ ಬದಿಯಲ್ಲಿ ಇರುವ ವಿದ್ಯುತ್ ಕಂಬಕ್ಕೆ ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಸಬಾರದು. ಈ ಕುರಿತು ಜಾಗೃತಿ ಕಾರ್ಯ ನಡೆಯುತ್ತಿದೆ ಎಂದು‌ ಮೆಸ್ಕಾಂ ಇಂಜಿನಿಯರ್ ಮಹೇಶ್ ಕುಳ ಹೇಳಿದರು. ಉಬರಡ್ಕ ಅಂಗನವಾಡಿ ಎದುರು ವಿದ್ಯುತ್ ಜೆಒಸಿ ಅಳವಡಿಕೆ ಮಾಡಿರುವ ಕಜರಿತು ಪಿ.ಎಸ್.ಗಂಗಾಧರ್ ಹಾಗೂ ಸುರೇಶ್ ಎಂ.ಹೆಚ್. ಆಕ್ಷೇಪ ವ್ಯಕ್ತ ಪಡಿಸಿ, ಬದಲಾಯಿಸಬೇಕೆಂದು ಒತ್ತಾಯಿಸಿದರು. ಗ್ರಾಮಕ್ಕೆ ನಗರ ಪ್ರದೇಶದಿಂದ ವಿದ್ಯುತ್ ಲೈನ್ ಬರುವಂತೆ ಯೋಜನೆ ಆಗಬೇಕು ಎಂದು ಸುರೇಶ್ ಎಂ.ಹೆಚ್. ಒತ್ತಾಯಿಸಿದರು.